ಮೂಡಿಗೆರೆ : ನಕಲಿ ನಂಬರ್ ಪ್ಲೇಟ್ ಹಾಕಿದ ಬೈಕ್ ವಶ ಪಡಿಸಿಕೊಂಡ ಬಣಕಲ್ ಪೊಲೀಸ್…

928

ಕೊಟ್ಟಿಗೆಹಾರ :ನಕಲಿ ನಂಬರ್ ಪ್ಲೇಟ್ ಹಾಕಿದ ಬೈಕ್‍ವೊಂದನ್ನು ಬಣಕಲ್ ಪೋಲಿಸರು ವಶ ಪಡಿಸಿಕೊಂಡಿದ್ದಾರೆ.
ಬಣಕಲ್‍ನ ಗುಡ್ಡಹಟ್ಟಿಯ ಅರುಣ್‍ಕುಮಾರ್ ಎಂಬುವವರು ಈ ಬಗ್ಗೆ ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದು ಕಳೆದ ಮೂರು ವರ್ಷದ ಹಿಂದೆ ಕೊಂಡಿದ್ದ ತಮ್ಮ ಬೈಕ್‍ನ ನಂಬರನ್ನು ಹೊಸಳ್ಳಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಬೈಕಿಗೆ ಹಾಕಿಕೊಂಡು ಚಲಾಯಿಸುತ್ತಿದ್ದಾರೆ ಎಂದು ದೂರು ನೀಡಿದ್ದು ಬಣಕಲ್ ಪೋಲಿಸರು ಅರುಣ್ ಕುಮಾರ್ ಅವರ ಬೈಕಿನ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್ ಚಲಾಯಿಸುತ್ತಿದ್ದ ಹೊಸಹಳ್ಳಿ ಮೂಲದ ವ್ಯಕ್ತಿಯೊಬ್ಬರ ಬೈಕನ್ನು ವಶಪಡಿಸಿಕೊಂಡಿದ್ದಾರೆ.