ಮೂಡಿಗೆರೆ : ನಮ್ಮ ಹಳ್ಳಿ ಹುಡುಗ್ರು ವಾಟ್ಸ್ಅಪ್ ತಂಡದಿಂದ ನೆರೆಪೀಡಿತ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ…

265
firstsuddi

ಕೊಟ್ಟಿಗೆಹಾರ : ನೆರೆಪೀಡಿತರ ಬದುಕು ವರ್ಷ ಕಳೆದರೂ ಮೊದಲಿನಂತಾಗಲು ಸಾಧ್ಯವಾಗಿಲ್ಲ. ನೆರೆಸಂತ್ರಸ್ಥ ಬದುಕು ಮತ್ತೆ ಮೊದಲಿನಂತಾಗಿ ಶಾಶ್ವತ ನೆಲೆ ಕಂಡು ಕೊಳ್ಳುವಂತಾಗಲಿ ಎಂದು ನಮ್ಮ ಹಳ್ಳಿ ಹುಡುಗ್ರು ವಾಟ್ಸಪ್ ಗ್ರೂಪ್‍ನ ಸದಸ್ಯ ಸಂದೀಪ್ ಜೇನುಬೈಲ್ ಹೇಳಿದರು.
ನಮ್ಮ ಹಳ್ಳಿ ಹುಡುಗ್ರು ವಾಟ್ಸ್ ಅಪ್ ತಂಡದಿಂದ ನಡೆದ ನೆರೆಪೀಡಿತ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಫಿ ದೊರೆ ಸಿದ್ದಾರ್ಥ ಹೆಗ್ಗಡೆ ಸ್ಮರಣಾರ್ಥ ಮೂಡಿಗೆರೆ ತಾಲ್ಲೂಕಿನ ನೆರೆಪೀಡಿತ ಪ್ರದೇಶವಾದ ಮಲೆಮನೆ, ಜಾವಳಿ, ಸಂಪ್ಲಿ, ಸುಂಖಶಾಲೆ, ಮಧುಗುಂಡಿ ದುರ್ಗದಹಳ್ಳಿಯಲ್ಲಿ 150 ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಕಳೆದ ವರ್ಷದ ನೆರೆಯಿಂದ ಬರಿದಾದ ಪ್ರದೇಶಗಳನ್ನು ಮತ್ತೆ ಹಸಿರಾಗಿಸಬೇಕಿದೆ ಎಂದರು.
ನಮ್ಮ ಹಳ್ಳಿ ಹುಡುಗ್ರು ವಾಟ್ಸಪ್ ಗ್ರೂಪ್‍ನ ಸದಸ್ಯ ಪ್ರಶಾಂತ್ ಬೆಟ್ಟಗೆರೆ ಮಾತನಾಡಿ ವಾಟ್ಸ್ ಅಪ್ ತಂಡದ ಮೂಲಕ ಸಕ್ರಿಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಅಗತ್ಯವಿದೆ. ಆಧುನಿಕ ಸವಲತ್ತುಗಳನ್ನು ಬಳಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಹಳ್ಳಿ ಹುಡುಗ್ರು ವಾಟ್ಸಪ್ ಗ್ರೂಪ್‍ನ ಸದಸ್ಯರಾದ ನಿಶಾಂತ್ ಬಣಕಲ್, ಪರೀಕ್ಷಿತ್ ಜಾವಳಿ, ಸಂತೋಷ್, ಅಜಿತ್, ಗಗನ್ ಹೊಕ್ಕಳ್ಳಿ, ಆದರ್ಶ್ ಬಾಳೂರು, ಮಧುರಾಮ್ ಹೆಗ್ಗರವಳ್ಳಿ ಮುಂತಾದವರು ಇದ್ದರು.