ಮೂಡಿಗೆರೆ : ನಾನು ನಿರಾಶ್ರಿತರ ಜೊತೆಯೇ ಊಟ ಮಾಡ್ತೀನಿ ಎಂದ ಸಚಿವ ಆರ್. ಅಶೋಕ್…

890

ಮೂಡಿಗೆರೆ : ಮಲೆನಾಡು ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಯಾಗಿರುವ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಆಗಮಿಸಿದ್ದು, ತಾಲ್ಲೂಕಿನ ಬಿದರಹಳ್ಳಿ ನಿರಾಶ್ರಿತರ ಕೇಂದ್ರದಲ್ಲಿ ನಾನು ನಿರಾಶ್ರಿತರ ಜೊತೆಯೇ ಊಟ ಮಾಡುತ್ತೇನೆ. ಯಾರ್ಯಾರು ಊಟ ಮಾಡಿಲ್ಲ, ಬನ್ರಪ್ಪಾ ಊಟ ಮಾಡೋಣ ಎಂದು ನಿರಾಶ್ರಿತರನ್ನು ಊಟಕ್ಕೆ ಕರೆದು ಅವರೊಂದಿಗೆ ಕುಳಿತು ಊಟ ಮಾಡಿದ್ದು, ಬಳಿಕ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿ ನೆರೆ ಪೀಡಿತ ಪ್ರದೇಶವಾದ ಮಲೆಮನೆ, ಮಧುಗುಂಡಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಎಂ.ಕೆ. ಪ್ರಾಣೇಶ್, ಮಾಜಿ ಶಾಸಕ ಜೀವರಾಜ್, ಬಿಜೆಪಿ ಮುಖಂಡರಾದ ಕಣಚೂರು ವಿನೋದ್, ಹಳಸೆ ಶಿವಣ್ಣ, ಪಲ್ಗುಣಿ ಸತೀಶ್, ಪಂಚಾಕ್ಷರಿ, ಸಂಜಯ್ ಕೊಟ್ಟಿಗೆಹಾರ ಇತರರು ಇದ್ದರು.