ಮೂಡಿಗೆರೆ : ನಿಡುವಾಳೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆ…

169
firstsuddi

ಕೊಟ್ಟಿಗೆಹಾರ : ನಿಡುವಾಳೆ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಗನವಾಡಿ, ಶಾಲೆ, ಅಂಗಡಿ ಮುಂಗಟ್ಟುಗಳು ಹಾಗೂ ಸೋಂಕಿತರ ಮನೆಗಳಿಗೆ ಸ್ಯಾನಿಟೈಸರ್ಸ್ ಸಿಂಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ, ನಿಡುವಾಳೆ ಗ್ರಾ.ಪಂ ವ್ಯಾಪ್ತಿಯ ವಾಟೆಖಾನ್ ಗ್ರಾಮದ ಅಂಗನವಾಡಿ, ಎಲ್ಲಾ ಅಂಗಡಿ ಮುಂಗಟ್ಟು, ನಿಡುವಾಳೆಯ ಶಾಲೆ, ಅಂಗನವಾಡಿ, ಆಸ್ಪತ್ರೆ, ಪಂಚಾಯತಿ ಕಟ್ಟಡ, ಬ್ಯಾಂಕ್, ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಕೊರೊನಾ ತಡೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಿಡುವಾಳೆ ಗ್ರಾ.ಪಂ ಅಧ್ಯಕ್ಷೆ ಶೃತಿ, ಪಿಡಿಓ ಚಂದ್ರಾವತಿ, ಸದಸ್ಯರಾದ ಅರುಣ್, ಸಿಬ್ಬಂದಿ ಪ್ರವೀಣ್, ಗ್ರಾಮಸ್ಥರಾದ ಸುಬ್ರಾಯ ಇದ್ದರು.