ಅನ್ನಭಾಗ್ಯ ಅಕ್ಕಿಯಲ್ಲಿ ಕಡಿತಗೊಳಿಸಿದ್ದಕ್ಕೆ ಮಹಿಳೆಯೊಬ್ಳು ಶಾಸಕರಿಗೆ ರಸ್ತೆ ಮಧ್ಯೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಗರದಲ್ಲಿ ನಡೆದಿದೆ. ಆದ್ರೆ, ಪಾಪ ಆ ಮಹಿಳೆಗೆ ಗೊತ್ತಿಲ್ಲ ಇದ್ರಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿಯ ಪಾತ್ರವಿಲ್ಲ ಎಂದು. ಆದ್ರು, ಅನ್ನಭಾಗ್ಯ ಅಕ್ಕಿ ಕಸಿದುಕೊಂಡು ಬಡವರ ಹೊಟ್ಟೆ ಮೇಲೆ ಏಕೆ ಹೊಡೆಯುತ್ತೀರಾ, ಶಾಸಕರೇ ನೀವು ಹಿಂದೆ ಬಡವರಾಗಿದ್ರಿ ಅನ್ನೋದನ್ನ ಮರೆಯಬೇಡಿ, ಅಕ್ಕಿಯನ್ನ ಕಡಿತಗೊಳಿಸಿದ್ರೆ, ಮಕ್ಕಳನ್ನ ಸಾಕೋದು ಹೇಗೆಂದು ಸುಬ್ಬಮ್ಮ ಎಂಬ ಮಹಿಳೆ ಶಾಸಕ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾಳೆ. ನಡುರಸ್ತೆಯಲ್ಲಿ ನಿಲ್ಲಿಸಿ ಪ್ರಶ್ನೆ ಕೇಳುತ್ತಿದ್ದಂತೆ ಶಾಸಕ ಕುಮಾರಸ್ವಾಮಿ ಮಹಿಳೆಗೆ ಸಮಾಧಾನ ಮಾಡಲು ಪ್ರಯತ್ನಿಸಿ, ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡ್ತೇನೆ ಎಂದು ಹೇಳಿದ್ದಾರೆ.
Home Breaking News ಮೂಡಿಗೆರೆ ಪಟ್ಟಣದ ನಡು ರಸ್ತೆಯಲ್ಲಿಯೇ ಶಾಸಕ ಎಂ ಪಿ ಕುಮಾರಸ್ವಾಮಿಗೆ ತರಾಟೆ ತಗೆದುಕೊಂಡ ಸುಬ್ಬಮ್ಮ.