ಮೂಡಿಗೆರೆ : ಪ್ರಸ್ತುತ ತೆರೆದಿರುವ ಅಂಗಡಿಗಳಲ್ಲಿ ದರಪಟ್ಟಿ ಹಾಕದಿದ್ದರೆ ಅಂಗಡಿಗಳ ಪರವಾನಗಿ ರದ್ದುಗೊಳಿಸುವಂತೆ ತಾ.ಪಂ ಅಧ್ಯಕ್ಷ ಕೆ.ಸಿ. ರತನ್ ಸೂಚನೆ…

664
firstsuddi

ಕೊಟ್ಟಿಗೆಹಾರ : ದಿನಸಿ, ಬೇಕರಿ, ಹಣ್ಣಿನ ಅಂಗಡಿ ಸೇರಿದಂತೆ ಪ್ರಸ್ತುತ ತೆರೆದಿರುವ ಅಂಗಡಿಗಳಲ್ಲಿ ದರಪಟ್ಟಿ ಹಾಕುವುದು ಕಡ್ಡಾಯವಾಗಿದ್ದು ದರಪಟ್ಟಿ ಹಾಕದಿರುವ ಅಂಗಡಿಗಳ ಪರವಾನಗಿ ರದ್ದು ಮಾಡುವಂತೆ ತಾ.ಪಂ ಅಧ್ಯಕ್ಷ ಕೆ.ಸಿ ರತನ್ ಗ್ರಾ.ಪಂಗೆ ಸೂಚಿಸಿದರು.
ತರುವೆಯ ಪ್ರೌಡಶಾಲೆಯಲ್ಲಿ ನಡೆದ ಗ್ರಾ.ಪಂ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ವ್ಯಾಪ್ತಿಯಲ್ಲಿ ಆಸಕ್ತಿ ಇರುವ ಗ್ರಾಮಸ್ಥರನ್ನು ಗ್ರಾಮ ಪಡೆಗೆ ಸೇರಿಸಿಕೊಳ್ಳಬಹುದು. ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಕರೊನಾ ಜಾಗೃತಿ ಮೂಡಿಸುವ ಕಾರ್ಯವಾಗುತ್ತಿದೆ. ವೈದ್ಯರು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ಪ್ರಕಾಶ್, ತಾ.ಪಂ ಉಪಾಧ್ಯಕ್ಷೆ ಪ್ರಮೀಳಾ, ನೋಡಲ್ ಅಧಿಕಾರಿ ಮಧುಸೂದನ್, ತರುವೆ ಗ್ರಾ.ಪಂ ಅಧ್ಯಕ್ಷ ರವಿಕಲಾ ಪೈ, ಜಿ.ಪಂ ಸದಸ್ಯ ಶಾಮಣ್ಣ, ಪಿಡಿಓ ಶಾರದಾ, ಸಿಬ್ಬಂದಿಗಳಾದ ಪ್ರವೀಣ್, ಕಾವ್ಯ, ಗ್ರಾಮಸ್ಥರಾದ ಗಜೇಂದ್ರ, ಬಿ.ಎಂ ಭರತ್, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕತೆಯರು ಇದ್ದರು.