ಮೂಡಿಗೆರೆ : ಇಂದು ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಆದರೆ ಮಲೆನಾಡಿನಲ್ಲಿ ಮಾತ್ರ ಹಬ್ಬದ ವಾತಾವರಣವಿಲ್ಲ. ಹೌದು, ಈ ವರ್ಷ ಸುರಿದ ರಣಭೀಕರ ಆಶ್ಲೇಷ ಮಳೆಗೆ ಮಲೆನಾಡು ಜನ ತತ್ತರಿಸಿ ಹೋಗಿದ್ದು, ಬದುಕೇ ಸತ್ತಿದೆ ಇನ್ನು ಹಬ್ಬ ಎಲ್ಲಿ ಅಂತಾ ಕಣ್ಣೀರಿಡುತ್ತಿದ್ದಾರೆ. ಬಿದರಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಇರುವ ತಾಲ್ಲೂಕಿನ ಮಧುಗುಂಡಿ ಗ್ರಾಮದಲ್ಲಿ ಮನೆ, ತೋಟ ಎಲ್ಲವನ್ನೂ ಕಳೆದುಕೊಂಡ ನಿರಾಶ್ರಿತರಲ್ಲಿ ಹಬ್ಬದ ವಾತಾವರಣವೇ ಇಲ್ಲದಂತಾಗಿದೆ. 40ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿದ್ದು, ಅವರೆಲ್ಲರಿಗೂ ಹಬ್ಬವೂ ಇಲ್ಲ, ಸಂಭ್ರಮವೂ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳುವ ಆತಂಕ ಇವರಲ್ಲಿ ಹೆಚ್ಚಾಗಿದ್ದು, ಮುಂದೆ ಬದುಕು ಹೇಗೆ ಎಂಬುವುದು ನಮಗೆ ಕಾಣುತ್ತಿಲ್ಲ. ನಮ್ಮ ಬದುಕು ಸತ್ತು ಹೋಗಿದೆ ಇನ್ನೆಲ್ಲಿ ಹಬ್ಬ ಮಾಡುವುದು. ಕಳೆದ 23 ದಿನಗಳಿಂದ ನಾವು ನಿರಾಶ್ರಿತರ ಕೇಂದ್ರದಲ್ಲಿ ಇದ್ದೇವೆ ಅಂತಾ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಉದೇಶ್ ಅವರು ಬೇಸರ ವ್ಯಕ್ತಪಡಿಸಿದರು.