ಮೂಡಿಗೆರೆ : ಬಾನಳ್ಳಿ ಗ್ರಾಮಕ್ಕೆ ಶಾಸಕ ಎಂ.ಪಿ. ಕುಮಾರಸ್ವಾಮಿ ಭೇಟಿ…

82
firstsuddi

ಕೊಟ್ಟಿಗೆಹಾರ ; ಫಲ್ಗುಣಿ ಗ್ರಾಮದ ಬಾನಳ್ಳಿಯ ಸರ್ವೆ ನಂಬರ್ 249ರ ಪ್ರದೇಶಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿ ನಿವೇಶನದ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿಯೇ ತಹಶೀಲ್ದಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸರ್ವೆ ಕಾರ್ಯ ನಡೆಸುವಂತೆ ಸೂಚಿಸಿದರು. ನಂತರ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ಫಲಾನುಭವಿಗಳಿಗೆ ನೀಡುವ ಬಗ್ಗೆ ಗ್ರಾ.ಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದ್ದು ಫಲಾನುಭವಿಗಳಿಗೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಕವೀಶ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಕೋಮಲಾ, ನಿವೇಶನ ರಹಿತ ಹೋರಾಟ ಅಧ್ಯಕ್ಷರಾದ ಬಿ.ಎಸ್.ವಿಜಯ, ಉಪಾಧ್ಯಕ್ಷ ಕೆ.ಎಂ ರವಿ, ಕಾರ್ಯದರ್ಶಿ ಶ್ರೀಧರ್, ನಂದೀಶ್ ಬಿ.ಎಸ್, ಖಜಾಂಚಿ ಸುನೀಲ್, ಸೀನ ಹಾಗೂ ಸದಸ್ಯರು ಇದ್ದರು.

ಫಲಾನುಭವಿಗಳಿಗೆ ಮನವಿ ಸಲ್ಲಿಕೆ
ಫಲ್ಗುಣಿ ಗ್ರಾಮ ಪಂಚಾಯತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ನಿವೇಶನ ಫಲಾನುಭವಿಗಳು ಗ್ರಾ.ಪಂ ಅಧ್ಯಕ್ಷರಾದ ಕವೀಶ್ ಅವರಿಗೆ ನಿವೇಶನ ಅರ್ಜಿಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿವೇಶನ ರಹಿತ ಹೋರಾಟ ಅಧ್ಯಕ್ಷರಾದ ಬಿ.ಎಸ್.ವಿಜಯ, ಬಾನಳ್ಳಿಯ ಸರ್ವೆ ನಂ 249 ರಲ್ಲಿ ಅಧಿಕಾರಿಗಳು ಬೇಟಿ ನೀಡಿ ಸರ್ವೆ ಕಾರ್ಯ ನಡೆಸಿದ್ದು ಫಲಾನುಭವಿಗಳು ಗ್ರಾ.ಪಂಗೆ ಮನವಿ ಸಲ್ಲಿಸುವಂತೆ ಸೂಚಿಸಿದ್ದರು. ಅರ್ಜಿಯನ್ನು ಪರಿಶೀಲಿಸಿ ಶೀಘ್ರವಾಗಿ ನಿವೇಶನವನ್ನು ಫಲಾನುಭವಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.