ಮೂಡಿಗೆರೆ : ಬಾಳೂರು ದರ್ಬಾರ್ ಪೇಟೆಯಲ್ಲಿ ಸಂತ ಅಂತೋನಿ ಹಬ್ಬ ಆಚರಣೆ…

108
firstsuddi

ಕೊಟ್ಟಿಗೆಹಾರ : ಬಾಳೂರು ದರ್ಬಾರ್ ಪೇಟೆಯಲ್ಲಿ ಸಂತ ಅಂತೋನಿಯವರ ಹಬ್ಬವನ್ನು ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಬಾಳೂರಿನ ದರ್ಬಾರ್ ಪೇಟೆಯಲ್ಲಿ ರೆಸ್ಟ್ ಪಾಯಿಂಟ್‍ನ ಪಕ್ಕದಲ್ಲಿ ಸಂತ ಅಂತೋನಿಯವರ ಗವಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಕ್ರೈಸ್ತ ಧರ್ಮದಲ್ಲಿ ಸಂತ ಅಂತೋನಿ ಪವಾಡ ಪುರುಷರಾಗಿ ಗುರುತಿಸಿಕೊಂಡಿದ್ದು ಅವರನ್ನು ಈ ದಿನ ಸ್ಮರಿಸಿ, ಕುಟುಂಬದ ಪರವಾಗಿ ವಿಶೇಷ ವರಗಳಿಗಾಗಿ ಹಾಗೂ ಕೋವಿಡ್ ಸೋಂಕು ದೂರವಾಗಿ ಜನರು ನೆಮ್ಮದಿಯಿಂದ ಬದುಕು ನಡೆಸುವ ಸಲುವಾಗಿ ನೆರೆದ ಕುಟುಂಬದ ಸದಸ್ಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರತಿವರ್ಷವೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮನೆಯವರೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ರೊನಾಲ್ಡ್ ಡಿಸೋಜ ತಿಳಿಸಿದರು. ಸಂದರ್ಭದಲ್ಲಿ ದರ್ಬಾರ್ ಪೇಟೆಯ ರೊನಾಲ್ಡ್ ಡಿಸೋಜ, ರಿಜ್ವಾನ ಡಿಸೋಜ, ರಿಯಾನ್ನ, ರಿನೊಲ, ರಾಲ್ಫಿ ಡಿಸೋಜ, ಪ್ಲೇವಿಯಾ ಡಿಸೋಜ, ಮೆಲ್ವಿನ್ ಫೆರ್ನಾಂಡಿಸ್ ಇದ್ದರು.