ಮೂಡಿಗೆರೆ : ಮಧ್ಯ ಸಿಗದೆ ಮನನೊಂದ ವ್ಯಕ್ತಿ ಆತ್ಮಹತ್ಯೆ…

1697
firstsuddi

ಮೂಡಿಗೆರೆ : ಲಾಕ್‍ಡೌನ್ ನಿಂದ ಕುಡಿಯಲು ಮಧ್ಯ ಸಿಗದೆ ನೊಂದ ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಜೆ.ಎಂ ರಸ್ತೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಯೋಗೇಶ್(40) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಹಲವು ವರ್ಷಗಳಿಂದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಕಳೆದ ಕೆಲವು ದಿನಗಳಿಂದ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದ ಮಧ್ಯದ ಅಂಗಡಿಗೆ ಬೀಗ ಹಾಕಲಾಗಿದ್ದು, ಕಳೆದ ಒಂದು ವಾರದಿಂದ ಮಧ್ಯಕ್ಕಾಗಿ ಹುಡುಕಾಟ ನಡೆಸಿದ ಯೋಗೇಶ್ ಮಧ್ಯ ಸಿಗದೇ ಬೇಸತ್ತು ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ ಪರಿಚಿತರ ಬಳಿ ಬೇಸರ ತೋಡಿಕೊಂಡಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮೂಡಿಗೆರೆ ಠಾಣಾಧಿಕಾರಿ ರವಿ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.