ಮೂಡಿಗೆರೆ : ಮೇಲಾಧಿಕಾರಿಗಳ ನಿರ್ಲಕ್ಷ, ಲೈನ್‍ಮ್ಯಾನ್ ವಿದ್ಯುತ್ ಕಂಬದಲ್ಲೇ ಸಾವು…

791
firstsuddi

ಮೂಡಿಗೆರೆ : ವಿದ್ಯುತ್ ಕಂಬದ ಮೇಲೆ ಕುಳಿತು ಕೆಲಸ ಮಾಡುತ್ತಿರುವಾಗ ಕಂಬದ ಮೇಲೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಸಿತೋಟ ಗ್ರಾಮದಲ್ಲಿ ನಡೆದಿದೆ. ಲೋಕೇಶ್ (25) ಮೃತಪಟ್ಟ ದುರ್ಧೈವಿ. ಇನ್ನೋರ್ವ ಲೈನ್‍ಮ್ಯಾನ್ ಸಿದ್ದೇಶ್ ಪ್ರಾಣಾಪಯದಿಂದ ಪಾರಾಗಿದ್ದು, ಇವರು ರಾಣೆಬೆನ್ನೂರು ಮೂಲದವರು ಎನ್ನಲಾಗಿದ್ದು, ಕಂಬದಲ್ಲಿ ಕೆಲಸ ಮಾಡುವಾಗ ಲೈನ್ ಚಾರ್ಜ್ ಆದ ಪರಿಣಾಮ ದುರ್ಘಟನೆ ನಡೆದಿದ್ದು, ಮೇಲಾಧಿಕಾರಿಗಳ ನಿರ್ಲಕ್ಷ ಲೈನ್‍ಮ್ಯಾನ್ ಸಾವಿಗೆ ಕಾರಣ ಎನ್ನಲಾಗಿದ್ದು, ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.