ಮೂಡಿಗೆರೆ : ಯುವಪೀಳಿಗೆ ಹಳ್ಳಿಯತ್ತ ಮರಳಿ ಕೃಷಿಯತ್ತ ಮುಖಮಾಡಬೇಕಿದೆ : ರವಿ ವಾಟೆಕಾನ್.

369
firstsuddi

ಕೊಟ್ಟಿಗೆಹಾರ: ಕರೊನಾ ಆತಂಕದಿಂದಾಗಿ ಪಟ್ಟಣದಲ್ಲಿ ಉದ್ಯೋಗದಲ್ಲಿರುವವರು ಸಂಕಷ್ಟದಲ್ಲಿದ್ದು ಯುವಪೀಳಿಗೆ ಹಳ್ಳಿಯತ್ತ ಮರಳಿ ಕೃಷಿಯತ್ತ ಮುಖಮಾಡಬೇಕಿದೆ ಎಂದು ಬಣಕಲ್ ಜೇಸಿಐ ವಿಸ್ಮಯದ ಅಧ್ಯಕ್ಷ ರವಿ ವಾಟೆಕಾನ್ ಹೇಳಿದರು.
ಬಣಕಲ್ ಜೇಸಿಐ ವತಿಯಿಂದ ಕೋಳೂರು ಗ್ರಾಮದ ಪ್ರಗತಿ ಪರ ಕೃಷಿಕ ಸಂದೀಪ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಕೃಷಿ ವಿಧಾನಗಳನ್ನು ಅನುಸರಿಸುವುದರ ಮೂಲಕ ಕೃಷಿಯಲ್ಲಿ ನಷ್ಟವಾಗುವುದನ್ನು ತಡೆಯಬಹುದು. ಕಾರ್ಮಿಕರ ಸಮಸ್ಯೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆಯಿಂದ ಪರಿಹಾರ ಕಂಡುಕೊಳ್ಳಬಹುದು. ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ಸರ್ವಾಂಗೀಣ ಅಭಿವೃದ್ದಿ ಸಾದ್ಯ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಜೇಸಿಐ ವಿಸ್ಮಯದ ಪಧಾಧಿಕಾರಿಗಳಾದ ಶಾಲಿನಿ ಸೋಮೇಶ್, ದಿನೇಶ್, ಸುರೇಂದ್ರ, ರವಿಶಂಕರ್, ನಾಟ್ಯರಂಜಿತ್, ರಂಜಿತ್, ಅರವಿಂದ್, ಗಗನ್, ಮದನ್, ಚಂದನ, ಯೋಗೀಶ್ ಮುಂತಾದವರು ಇದ್ದರು.