ಮೂಡಿಗೆರೆ : ವಿದ್ಯುತ್ ಸಮಸ್ಯೆ ಮೆಸ್ಕಾಂ ಕಚೇರಿಗೆ ಮುತ್ತಿಗೆ.

69

ಮೂಡಿಗೆರೆ :ಕಳೆದ ಮೂರು ವಾರದಿಂದ ಕರೆಂಟಿಲ್ಲದೆ, ಕುಡಿಯುವ ನೀರು ಪೂರೈಕೆಗೂ ತೊಂದರೆಯಾಗಿದು.ವಿದ್ಯುತ್ ಕೊರತೆ ಎಂಬ ಕಾರಣಕ್ಕಾಗಿ ಬೇಸಗೆಯಲ್ಲಿ ವಿದ್ಯುತ್ ಕಡಿತದ ಸಂಕಷ್ಟವನ್ನು ಸಹಿಸಿಕೊಂಡಿದ್ದ ದಾರದಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಮಳೆಗಾಲದಲ್ಲೂ ಕರೆಂಟಿಲ್ಲ ಎಂದು ದಾರದಹಳ್ಳಿ ಮೆಸ್ಕಾಂ ಕಚೇರಿಗೆ ಬೀಗ ಹಾಕಿ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು,

ಗ್ರಾಮಸ್ಥರಾದ ಪ್ರಸಾದ್ ದಾರದಹಳ್ಳಿ ಅವರು ಮಾತನಾಡಿ ನಮ್ಮ ಭಾಗದಲ್ಲಿ ವಿದ್ಯುತ್ ಸಮಸ್ಸೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ, ಕುಡಿಯುವ ನೀರಿಗೂ ತೊಂದರೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಲೈನ್ ಮೇಲೆ ಬಿದ್ದರೆ ದುರಸ್ತಿ ಮಾಡಲು ಇಲ್ಲಿ ಬೇಕಾದಷ್ಟು ಲೈನ್‌ಮನ್‌ಗಳಿಲ್ಲ. ದಾರದಹಳ್ಳಿ ವಲಯದ 12 ಗ್ರಾಮಗಳಿಗೆ ಕನಿಷ್ಠ 10 ಜನ ಲೈನ್‌ಮನ್‌ಗಳ ಅವಶ್ಯಕತೆ ಇದ್ದರೆ ಇಲ್ಲಿರುವುದು ಕೇವಲ ನಾಲ್ಕು ಮಾತ್ರ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು. ಈ ಹಿಂದೆ ತೋಟಗದೆಯಲ್ಲಿ ವಿದ್ಯುತ್ ಲೈನ್ ಇತ್ತು. ಆಗಲು ನಮಗೆ ಇಷ್ಟು ಸಮಸ್ಯ ಆಗಿಲ್ಲ. ಈಗ ಎಲ್ಲ ವಿದ್ಯುತ್ ಲೈನ್ಗಳು ರಸ್ತೆ ಬದಿಯಲ್ಲಿ ಹಾದು ಹೋಗಿದ್ದು. ಏಕೆ ನಮ್ಮ ಗ್ರಾಮಕ್ಕೆ ಈ ಪರಿಸ್ಥಿತಿ ಎಂಬುದು ನನಗೆ ಅರ್ಥ ಆಗಿಲ್ಲ ಶಾಸಕರು ಕೂಡಲೇ ಈ ಬಗ್ಗೆ ಗಮನ ನೀಡಬೇಕು ಎಂದುರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಂಪೇಗೌಡ ಸಂಘದ ಹೋಬಳಿ ಅಧ್ಯಕ್ಷ ಕೆಸವಳಲು ದಯಾನಂದ್ ಗೌಡ ಮಾತನಾಡಿ ವಿದ್ಯುತ್ ವ್ಯತ್ಯಾಯದಿಂದ ವಿದ್ಯುತ್ ಉಪಕರಣಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ.ಕಣ್ಮುಚ್ಚಿ ಬಿಡುವುದರಲ್ಲಿ ದಿಡೀರ್ ವಿದ್ಯುತ್ ನೀಡಿ ತೆಗೆಯುವುದರಿಂದ ಫ್ರಿಜ್ ಮುಂತಾದ ಎಲೆಕ್ಟ್ರಾರಾನಿಕ್ ಉಪಕಾರಣಗಳು ಹಾನಿಯಾಗುತ್ತಿದ್ದೂ. ಕೂಡಲೇ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ  ಇಂಜಿನಿಯರ್ ಜಿತೇಂದ್ರ ಪಾಲ್ ನಾನು ಮೂಡಿಗೆರೆಗೆ ಬಂದು ಕೆಲವು ದಿನ ಆಗಿದೆ, ಸಮಾಸ್ಯೆಗಳ ಸಂಪೂರ್ಣ ಮಾಹಿತಿ ಪಡೆದಿದ್ದು, ಸಮಸ್ಸೆಯನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಶ್, ವಿಕ್ರಂ, ಗ್ರಾಮಸ್ಥರಾದ ಆತ್ಹ್ಮಿಯ ಪಟೇಲ್, ವಿನಯ್ ಕೆಸವಳಲು, ಪರೀಕ್ಷಿತ್ ಸೇರಿದಂತೆ  ಕೆಸವಳಲು, ಕಡಿದಾಳ್, ಕೊಣಗೆರೆ, ಹೇಮತಿನಗರ ಗ್ರಾಮಸ್ಥರು ಇದ್ದರು.