ಮೂಡಿಗೆರೆ : ಭಾರಿ ಬಿರುಗಾಳಿ ಮಳೆಯಿಂದಾಗಿ ಬಾಳೆ ತೋಟ ನಾಶವಾಗಿದ್ದು, ಇಂದು ತಾಲ್ಲೂಕಿನ ರೈತ ಕೆಂಬತ್ತಮಕ್ಕಿ ರಾಜಣ್ಣ ಅವರ ತೋಟಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೊನ್ನೆಯ ಬಿರುಗಾಳಿ ಆರ್ಭಟಕ್ಕೆ 6.5 ಎಕರೆ ಬಾಳೆತೋಟದಲ್ಲಿ 9000 ಬಾಳೆ ಗಿಡಗಳು ಸಂಪೂರ್ಣ ನೆಲಸಮವಾಗಿತ್ತು. ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಎನ್‍ಡಿಆರ್‍ಎಫ್ ಫಂಡ್‍ನಿಂದ 27 ಸಾವಿರದ ಚೆಕ್‍ನ್ನು ಸಂತ್ರಸ್ಥ ರೈತ ರಾಜಣ್ಣ ಅವರ ಪುತ್ರ ಬೃಹತ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂವಿತಾ, ತಹಾಸೀಲ್ದಾರ್ ರಮೇಶ್, ಗ್ರಾಮ ಲೆಕ್ಕಾಧಿಕಾರಿ ಮಿಥುನ್ ಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ರೈತ ರಾಜಣ್ಣ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್…










