ಮೂಡಿಗೆರೆ : ಸ್ಕೂಟರ್ ಸೀಟನ್ನೆ ಜಜ್ಜಿ ಒಡೆದು ತೆಗೆದು ಮದ್ಯದ ಬಾಟಲಿಗೆ ಸ್ಟ್ರಾ ಹಾಕಿ ಕುಡಿದ ಭೂಪ…

788
firstsuddi

ಕೊಟ್ಟಿಗೆಹಾರ : ಸ್ಕೂಟರ್ ಕೀ ಕಳೆದು ಹೋಗಿ ಸೀಟಿನಡಿಯ ಡಿಕ್ಕಿಯಲ್ಲಿದ್ದ ಮದ್ಯವನ್ನು ತೆಗೆಯಲು ಸಾಧ್ಯವಾಗದೇ ವ್ಯಕ್ತಿಯೊಬ್ಬರು ಸ್ಕೂಟರ್ ಸೀಟನ್ನೆ ಜಜ್ಜಿ ಒಡೆದು ತೆಗೆದು ಮದ್ಯದ ಬಾಟಲಿಗೆ ಸ್ಟ್ರಾ ಹಾಕಿ ಕುಡಿದ ಘಟನೆ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಕೊಟ್ಟಿಗೆಹಾರದ ಹರೀಶ್ ಎಂಬ ಭೂಪನೊಬ್ಬ ಬಾರಿನಿಂದ ಮದ್ಯದ ಬಾಟಲಿಯನ್ನು ಖರೀದಿಸಿ ಸ್ಕೂಟರ್ ಡಿಕ್ಕಿಯಲ್ಲಿಟ್ಟುಕೊಂಡಿದ್ದು ಬಾರಿನಿಂದ ಹಿಂದಿರುಗಿದ ನಂತರ ಸ್ಕೂಟರ್ ಕೀ ಕಳೆದು ಹೋಗಿದೆ. ಸ್ಕೂಟರ್ ಡಿಕ್ಕಿಯಲ್ಲಿದ್ದ ಮದ್ಯವನ್ನು ತೆಗೆಯಲು ಹರಸಾಹಸ ಪಟ್ಟರೂ ಸಾದ್ಯವಾಗದೇ ಇದ್ದಾಗ ಸೀಟಿನ ಮೇಲ್ಭಾಗವನ್ನು ತೆಗೆದು ಬಾಟಲಿ ಮುಚ್ಚುಳದ ಭಾಗದಲ್ಲಿ ಸೀಟನ್ನು ಒಡೆದು ಸ್ಟ್ರಾ ಹಾಕಿ ಮದ್ಯ ಸೇವಿಸಿದ್ದಾನೆ.