ಮೂಡಿಗೆರೆ : ಹೊರರಾಜ್ಯದಿಂದ ಖಾಸಾಗಿ ಎಸ್ಟೇಟ್‍ಗೆ ಕಾರ್ಮಿಕರು ಬಂದಿರುವ ಹಿನ್ನಲೆ ಅಧಿಕಾರಿಗಳ ಬೇಟಿ…

269
firstsuddi

ಕಳಸ : ಕೊರೊನಾದ ಎರಡನೆ ಅಲೆ ವೇಗವಾಗಿ ಹರಡುತ್ತಿರುವಾಗಲೇ ಹೊರರಾಜ್ಯದಿಂದ ಎಸ್ಟೇಟ್‍ಗೆ ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಖಾಸಾಗಿ ಎಸ್ಟೇಟೊಂದಕ್ಕೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಖಾನ್ ಎಸ್ಟೇಟ್‍ಗೆ ನಿನ್ನೆ ಅಸ್ಸಾಂನಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಅವರಿಗೆ ಎಸ್ಟೇಟ್ ಬಳಿಯ ಖಾಂಡ್ಯ ಎಂಬ ಗ್ರಾಮದ ಖಾಲಿ ಮನೆಗಳಲ್ಲಿ ಕೂರಿಸಿದ್ದಾರೆ. ಇವರಿಗೆ ಯಾವುದೇ ಕೋವಿಡ್ ಪರೀಕ್ಷೆಯನ್ನು ಮಾಡಲಿಲ್ಲ. ಯಾರಿಗಾದರೂ ಪಾಸಿಟೀವ್ ಇದ್ದರೆ ಊರಿಡೀ ಹರಡುವ ಸಾದ್ಯತೆ ಇದೆ. ಯಾವುದೇ ಮಾಸ್ಕ್ ಇಲ್ಲದೆ ತಿರುಗಾಡುತ್ತಿದ್ದಾರೆ ಎಸ್ಟೇಟ್ ಬೇಜಾವಬ್ದಾರಿತನ ತೋರಿಸುತ್ತಿದೆ ಕೂಡಲೇ ಸಂಬಂದಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಿ ಎಂದು ಖಾಂಡ್ಯ ಗ್ರಾಮಸ್ಥರು ಕೇಳಿಕೊಂಡಿದ್ದರು.

ಇಂದು ಬೆಳಿಗ್ಗೆಯೇ ಕೋವಿಡ್ ನೋಡೆಲ್ ಅಧಿಕಾರಿ ಜಯದೇವಪ್ಪ, ತಹಶೀಲ್ದಾರ್ ರಮೇಶ್, ರೆವಿನ್ಯೂ ಇನ್ಸ್‍ಪೆಕ್ಟರ್ ಅಜ್ಜೇಗೌಡ, ವಿಎ ಮೆಹಬೂಬ್, ಕುದುರೆಮುಖ ವೃತ್ತ ನಿರೀಕ್ಷ ವಿಜಯಕುಮಾರ್, ಕಳಸ ಪಿಎಸೈ ಮಂಜಯ್ಯ, ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಎಸ್ಟೇಟ್‍ಗೆ ತೆರಳಿ ವ್ಯವಸ್ಥಾಪಕರನ್ನು ವಿಚಾರಿದ್ದಾರೆ.

ಈ ಸಂದರ್ಭದಲ್ಲಿ ಅಸ್ಸಾಂ ಮೂಲದ 30 ಕಾರ್ಮಿಕರನ್ನು ಬಸ್ಸಿನಲ್ಲಿ ಕರೆದುಕೊಂಡು ಬರಲಾಗಿದೆ. ಆದರೆ ಮುಂಜಾಗೃತ ಕ್ರಮ ಯಾವುದನ್ನು ತೆಗೆದುಕೊಂಡಿಲ್ಲ. ಕಾರ್ಮಿಕರ ಯಾವುದೇ ಪರೀಕ್ಷೆಯನ್ನು ಕೂಡ ಮಾಡಲಿಲ್ಲ, ಸರ್ಕಾರದ ನಿಯಮಾವಳಿಗಳನ್ನು ಇಲ್ಲಿ ಪಾಲನೆ ಮಾಡದೆ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿದೆ ಎನ್ನುವುದು ಕೂಡ ಮೇಲ್ನೋಟಕ್ಕೆ ಕಂಡು ಬಂದಿದೆ.

ಕೂಡಲೇ ಕಾರ್ಮಿಕರನ್ನು ತಪಾಸಣೆ ಮಾಡಿ ವರದಿಯನ್ನು ನೀಡಬೇಕು. ಕಾರ್ಮಿಕರಿಗೆ ಸರಿಯಾದ ಊಟೋಪಾಚಾರಗಳನ್ನು ನೀಡಬೇಕು 14 ದಿನ ಊರಿಂದ ಹೊರಗಡೆ ಬಿಡಕೂಡದು ಎಂದು ಎಸ್ಟೇಟ್ ವ್ಯವಸ್ಥಾಪಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೋಟ್:ಜಯದೇವಪ್ಪ:ಕೋವಿಡ್ ನೋಡೆಲ್ ಅಧಿಕಾರಿ.
ಮೇಲ್ನೋಟಕ್ಕೆ ಎಸ್ಟೇಟ್ ವ್ಯವಸ್ಥಾಪಕರು ಇಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಯನ್ನು ಯಾವುದನ್ನು ಪಾಲನೆ ಮಾಡದಿರುವುದು ಕಂಡು ಬಂದಿದೆ. ಆದ್ದರಿಂದ ಎಸ್ಟೇಟ್ ವ್ಯವಸ್ಥಾಪಕರಿಗೆ ನೋಟೀಸ್ ಜಾರಿ ಮಾಡುತ್ತೇನೆ.

ಕೋಟ್:ಸಂದೀಪ್;ಖಾಂಡ್ಯ ಗ್ರಾಮಸ್ಥ
ಗುಮ್ಮನಖಾನ್ ಎಸ್ಟೇಟ್ ವ್ಯವಸ್ಥಾಪಕರು ಹೊರರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ನಮ್ಮ ಊರ ಪಕ್ಕದಲ್ಲಿ ಕೂರಿಸಿದ್ದಾರೆ. ಇಲ್ಲಿ ಕಾರ್ಮಿಕರಿಗೆ ಯಾವುದೇ ಕೊರೊನಾ ಟೆಸ್ಟ್ ಗಳನ್ನು ಮಾಡಲಿಲ್ಲ. ಅಲ್ಲದೆ ಬಂದಿರುವ ಕಾರ್ಮಿಕರು ಮನೆಯಲ್ಲಿರದೆ ಊರಿಡೀ ತಿರುಗಾಡುತ್ತಿದ್ದಾರೆ. ನಮ್ಮಲ್ಲಿ ಸಾಕಷ್ಟು ಜನ ವೃದ್ಧರು ಇದ್ದಾರೆ ಆಕಸ್ಮಾತ್ ಕಾರ್ಮಿಕರಲ್ಲಿ ಪಾಸಿಟೀವ್ ಇದ್ದರೆ ಯಾರು ಹೊಣೆ.