ಮೂಡಿಗೆರೆ : 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಗೆ ಬಾಳೂರು ರಕ್ಷಿತಾರಾಜ್ ಆಯ್ಕೆ…

684

ಫಸ್ಟ್ ಸುದ್ದಿ : ಭಾರತಕ್ಕೆ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನದ ಪದಕ ತಂದಿದ್ದ ಮೂಡಿಗೆರೆ ತಾಲ್ಲೂಕಿನ ರಕ್ಷಿತಾರಾಜ್ 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಗೆ ಆಯ್ಕೆಯಾಗಿದ್ದು, ಜುಲೈ 28ರಿಂದ ಆಗಸ್ಟ್ 7ರ ವರೆಗೆ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸುವ ಇವರು ದುಬೈನಲ್ಲಿ ನಡೆಯಲಿರುವ ಸೀನಿಯರ್ ವಿಶ್ವ ಚಾಂಪಿಯನ್‍ಶಿಪ್‍ಗೂ ಆಯ್ಕೆಯಾಗಿದ್ದಾರೆ ಎಂದು ರಕ್ಷಿತಾ ಅವರ ಕೋಚ್ ರಾಹುಲ್ ಅವರು ತಿಳಿಸಿದ್ದಾರೆ.