ಬೆಂಗಳೂರು : ಮೂವರು ಮಕ್ಕಳನ್ನು ತಂದೆಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮೈಕೋ ಲೇಔಟ್‍ನಲ್ಲಿ ನಡೆದಿದೆ. ಮೃತರನ್ನು ಜನಕರಾಜ್ ಬಿಸ್ತಾ(32), ಸರಸ್ವತಿ(14) ಹೇಮಂತಿ(9) ಹಾಗೂ ರಾಜ್ ಕುಮಾರ್(3) ಎಂದು ಗುರುತಿಸಲಾಗಿದೆ. ಮೃತ ಜನಕರಾಜ್ ಮೈಕೋ ಲೇಔಟ್ ನ ರಮಣಶ್ರೀ ಎನ್ಕ್ಲೇವ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಜನಕರಾಜ್ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಜನಕರಾಜ್ ಮೊದಲು ತಮ್ಮ ಮೂವರು ಮಕ್ಕಳನ್ನು ನೇಣು ಬಿಗಿದು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನಿಡಿದ ಮೈಕೋ ಲೇಔಟ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.










