ಮೇ 31ಕ್ಕೆ ಮುಂಗಾರು ಮಳೆ ಪ್ರವೇಶ.

21

ನವದೆಹಲಿ,-ಮುಂಗಾರು ಮಳೆಯ ಆಗಮನ ಕುರಿತು ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ (IMD)ಮುಂಗಾರು ಮಳೆಯ ಋತುವಿನಲ್ಲಿ ಈ ವರ್ಷ ಮುಂದಿನ ನಾಲ್ಕು ತಿಂಗಳು ಕಾಲ ಅತ್ಯಧಿಕ ಮಳೆ ಆಗಲಿದೆ.  ಎಂದು ತಿಳಿಸಿದೆ.ಈ ಮೂಲಕ ಹವಾಮಾನ ಇಲಾಖೆ ತಜ್ಞರು ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ


ಪ್ರತಿವರ್ಷ ಜೂನ್ ನಿಂದ ಭಾರತದಲ್ಲಿ ಮುಂಗಾರು ಸುರಿಸುವ ಮೋಡಗಳು ಆಗಮಿಸುತ್ತವೆ. ಆದರೆ ಈ ಭಾರಿ ಅವಧಿಗೂ ಮೊದಲೇ ದೇಶದಲ್ಲಿ ಮುಂಗಾರು ಆಗಮಿಸಲಿದೆ. 
ಮುಂಗಾರು ಅವಧಿಯಲ್ಲಿ ಈಶಾನ್ಯ ರಾಜ್ಯಗಳು, ದಕ್ಷಿಣದ ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಇನ್ನೂ ಈ ಮುಂಗಾರು ಮೇ ತಿಂಗಳಲ್ಲಿ ಕೇರಳ ಪ್ರವೇಶಿಸಿದರೆ, ಕರ್ನಾಟಕವನ್ನು ತದನಂತರದ ಒಂದು ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್ ತಿಂಗಳಾಂತ್ಯಕ್ಕೆ ಇಡಿ ಭಾರತದಲ್ಲಿ ಮುಂಗಾರು ಸಕ್ರಿಯಗೊಂಡಿರಲಿದೆ ಎಂಬ ಮುನ್ಸೂಚನೆ ಇದೆ.
ಸದ್ಯ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೆಲವು ದಿನಗಳಿಂದ ಮಳೆ ಆಗುತ್ತಿದೆ. ಕರ್ನಾಟಕದ ಒಳನಾಡಿನಲ್ಲಿ ಭೂಮಿಯ ಮೇಲ್ಮೈನಲ್ಲಿ 1.5 ಕಿಲೋ ಮೀಟರ್ ಎತ್ತರದಲ್ಲಿ ಸ್ಟ್ರೈಫ್ ಹಾದು ಹೋಗಿದೆ. ಈ ವೈಪರಿತ್ಯದಿಂದಾಗಿ ಜೋರು ಮಳೆ ಆಗುತ್ತಿದೆ. ಇನ್ನೂ ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು ಹಾಸನ ಜಿಲ್ಲೆಗಳಲ್ಲಿ ಇದೇ ರೀತಿ ಗುಡುಗು, ಮಿಂಚು ಮತ್ತು ಜೋರುಗಾಳಿ ಸಹಿತ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಬೆಂಗಳೂರು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.