ಚಿಕ್ಕಮಗಳೂರು : ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿರುವುದನ್ನು ಖಂಡಿಸಿ ಆಗಸ್ಟ್ 26 ರಂದು ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ನನ್ನ ನೇತೃತ್ವದಲ್ಲಿ ಎಸ್ ಪಿ ಕಚೇರಿಗೂ ಮುತ್ತಿಗೆ ಹಾಕುತ್ತೇವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾಸಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ನನ್ನ ವಿರುದ್ಧ ಪ್ರತಿಭಟನೆ ಮಾಡಲು ಸರ್ಕಾರವೇ ಕುಮ್ಮಕ್ಕು ನೀಡಿದೆ. ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನ ಗೆಲ್ಲುವ ಸಂಭವವಿದೆ. ಈ ಹತಾಶೆಯಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಾಗಿದೆ. ಗೋ ಬ್ಯಾಕ್ ಅಂದ್ರೆ ಎಲ್ಲಿಗೆ ಹೋಗಲಿ. ಸೆಕ್ಯುರಿಟಿ ನೀಡೋದು ಪೊಲೀಸರ ಜವಾಬ್ದಾರಿ. ಈ ಸರ್ಕಾರ ಕೆಟ್ಟ ಮತ್ತು ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು.
ಬಿಜೆಪಿಯವರು ಮೂರು ನಾಲ್ಕು ಕಡೆ ಪ್ರತಿಭಟನೆ ಮಾಡುತ್ತಿರುವುದು ಗೊತ್ತಿದ್ದರೂ ಪೊಲೀಸರು ಸುಮ್ಮನಾಗಿದ್ದರು. ಅದೇ ಸಿಎಂ ಬಂದಿದ್ರೆ ಹೀಗೆ ಪೊಲೀಸರು ಮಾಡ್ತಿದ್ರಾ.? ಕೊಡಗಿನ ಎಸ್ ಪಿಗೆ ಯಾವ ರೋಗ ಬಂದಿತ್ತು ಎಂದು ಕೊಡಗು ಪೊಲೀಸರ ವಿರುದ್ಧ ಗರಂ ಆದರು.










