ಯುವಕನ ಅಂಗಾಂಗ ದಾನ ; ಝೀರೋ ಟ್ರಾಫಿಕ್ ನಲ್ಲಿ ಕಲಬುರಗಿಯಿಂದ ಹೈದರಬಾದ್ ಗೆ ರವಾನೆ…

71
firstsuddi

ಕಲಬುರಗಿ : ನಗರದ ಆಳಂದ ತಾಲ್ಲೂಕಿನ ಲಾಡಮುಗಳಿ ಗ್ರಾಮದ 19 ವರ್ಷದ ಮಹೇಶ ಎಂಬ ಯುವಕ ಮನೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ ಆತನ ಮೆದುಳು ನಿಷ್ಕ್ರಿಯವಾಗಿತ್ತು. ಮೆದುಳು ಸಿಷ್ಕ್ರಿಯವಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಇಂದು ಕಲಬುರಗಿಯಿಂದ ಹೈದರಬಾದ್ ಗೆ ಝೀರೋ ಟ್ರಾಫಿಕ್ ನಲ್ಲಿ ಯುವಕನ ಅಂಗಾಗ ರವಾನಿಸಲಾಯಿತು.

ಇಂದು ಮುಂಜಾನೆ ಮೃತ ಯುವಕನ ಲಿವರ್ ನ ತೆಗೆದು ಹೈದರಾಬಾದ್ ಗೆ ಕಳುಹಿಸಲಾಗಿದೆ. ಇದೀಗ ಹೈದರಾಬಾದ್‌ ನಿಂದ ಏರ್​​ ಲಿಫ್ಟ್ ಮೂಲಕ ಬೆಂಗಳೂರಿಗೆ ರವಾನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.