ಯುವತಿ ಮನೆಯವರಿಂದ ಮಾನಸಿಕ ಕಿರುಕುಳ – ವಿಷ ಸೇವಿಸಿ ಯುವಕ ಆತ್ಮಹತ್ಯೆ…

81
firstsuddi

ಹಾವೇರಿ : ಯುವತಿ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದಲ್ಲಿ ನಡೆದಿದೆ. ಪ್ರಸನ್ನ ಲಮಾಣಿ (20) ಮೃತ ಯುವಕ.

ಕಳೆದ ಒಂದು ವರ್ಷದ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಸನ್ನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನಿಂದ ಬಂದ ಬಳಿಕ ಯುವತಿಯನ್ನ ಮದುವೆಯಾಗು ಎಂದು ಯುವತಿ ಹಾಗೂ ಆಕೆಯ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಅಲ್ಲದೇ ಮದುವೆಯಾಗಿ ಆಕೆಯನ್ನು ಕರೆದುಕೊಂಡು ಹೋಗದಿದ್ದರೆ ಜೀವಸಹಿತ ಬಿಡೋದಿಲ್ಲ ಅಂತಾ ಯುವತಿ ಮನೆಯವರು ಜೀವಬೆದರಿಕೆ ಹಾಕುತ್ತಿದ್ದರು.

ಇದರಿಂದ ಮನನೊಂದ ಪ್ರಸನ್ನ ತನ್ನ ಸಾವಿಗೆ ಯುವತಿಯೇ ಕಾರಣ ಎಂದು ವಾಟ್ಸ್ ಆ್ಯಪ್ ನಲ್ಲಿ ಸ್ಟೇಟಸ್ ಹಾಕಿ, ಯುವತಿಯ ಹೆಸರು ಮತ್ತು ಆಕೆಯೊಂದಿಗೆ ಓಡಾಡಿದ್ದ ಫೋಟೋಗಳನ್ನಿಟ್ಟು ನಿನ್ನೆ ಸಂಜೆ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಆತನನ್ನು ಮಾಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ತಂದೆ ಯುವತಿ ಸೇರಿ ಯುವತಿ ಮನೆಯವರ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.