ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 12 ಮಂದಿ ಯುವಕರನ್ನು ಬಂಧಿಸಿದ ಪೊಲೀಸರು…

166
firstsuddi

ಬೆಂಗಳೂರು : ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 12 ಮಂದಿ ಯುವಕರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಯಲಹಂಕ, ನೆಲಮಂಗಲ, ಹೆಬ್ಬಾಳ, ಆರ್.ಟಿ. ನಗರ, ಹೆರಘಟ್ಟ ರಸ್ತೆಯಲ್ಲಿ ಯುವಕರು ಬೈಕ್ ವೀಲ್ಹಿಂಗ್ ಮಾಡುತ್ತಿರುವುದು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಈ ವೇಳೆ ಪೊಲೀಸರು ವೀಲ್ಹಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನತ್ತಿ ಹೋಗಿ ಬಂಧಿಸಿದ್ದಾರೆ. ಈ ಕುರಿತು ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.