ರಾಜ್ಯದಲ್ಲಿ ಉಗ್ರರ ದಾಳಿ ಭೀತಿ, ಮೆಟ್ರೋ ನಿಲ್ದಾಣದಲ್ಲಿ ಸಶಸ್ತ್ರ ಯೋಧರ ಭದ್ರತೆ…

214
firstsuddi

ಬೆಂಗಳೂರು : ಉಗ್ರರು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ಇಲಾಖೆಯವರ ಮಾಹಿತಿ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ಸಶಸ್ತ್ರ ಯೋಧರ ಭದ್ರತೆ ಒದಗಿಸಲಾಗಿದೆ. ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಪ್ರವೇಶ ಧ್ವಾರದಲ್ಲೇ ನಿಲ್ಲಿಸಿ ಪ್ರಯಾಣಿಕರ ಪರ್ಸ್ ಹಾಗೂ ಮೊಬೈಲ್‍ಗಳನ್ನು ತಪಾಸಣೆ ಮಾಡಿ ಬಳಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಹಾಗೂ ವಿಧಾನ ಸೌಧದ ಸುತ್ತ ಮುತ್ತ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ವಿಧಾನ ಸೌಧದ ಒಳಗೆ ಹೋಗುವವರ ತಪಾಸಣೆ ಮಾಡಿ ಬಳಿಕ ಒಳಗೆ ಬಿಡಲಾಗುತ್ತಿದೆ. ಅಲ್ಲದೇ ಜನಸಂಧಣೆ ಹೆಚ್ಚಾಗಿರುವ ಆಸ್ಪತ್ರೆ, ಮಾಲ್, ಪಿಜಿ, ಹಾಸ್ಟೆಲ್, ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಬಳಿಯೂ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.