ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ : ಪ್ರಹ್ಲಾದ್ ಜೋಶಿ.

94
firstsuddi

ಹುಬ್ಬಳ್ಳಿ : ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಅಧಿಕಾರಾವಧಿ ಪೂರ್ಣಗೊಳಿಸಲಿದ್ದಾರೆ. ನಾನು ಕೇಂದ್ರದ ಮಂತ್ರಿಯಾಗಿರುವುದರಿಂದ ಹುಬ್ಬಳ್ಳಿ ಅಥವಾ ದೆಹಲಿಯಲ್ಲಿದ್ದಾಗ ಅನೇಕ ನಾಯಕರು ಭೇಟಿ ಮಾಡುತ್ತಾರೆ. ಸಿಎಂ ಬದಲಾವಣೆ ವಿಚಾರವಾಗಿ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ರಾಜ್ಯ ರಾಜಕೀಯದ ಬಗ್ಗೆ ಯಾರೂ ಚರ್ಚಿಸಿಲ್ಲ. ಈಗಿರುವ ನಮ್ಮ ಉದ್ದೇಶ ಕೋವಿಡ್ ನಿಯಂತ್ರಣ ಮಾಡುವುದು ಎಂದರು.

ಬಿಜೆಪಿಯಲ್ಲಿ ಸಮರ್ಥರು ಯಾರಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ನಲ್ಲಿ ಸಮರ್ಥರು ಬಹಳ ಇದ್ದಾರೆಂದು ಬಡಿದಾಡುತ್ತಿದ್ದಾರೆ ಎಂದರು.