ರಾಜ್ಯಸಭಾ ಸ್ಥಾನಕ್ಕೆ ವೈಎಸ್‌ಆರ್‌ಸಿಪಿ ನಾಯಕ ವಿಜಯಸಾಯಿ ರೆಡ್ಡಿ ರಾಜೀನಾಮೆ.

26

ನವದೆಹಲಿ: ರಾಜ್ಯಸಭಾ ಸ್ಥಾನಕ್ಕೆ ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ವಿ. ವಿಜಯಸಾಯಿ ರೆಡ್ಡಿ ಅವರು ವೈಯಕ್ತಿಕ ಕಾರಣ ನೀಡಿ ಇಂದು ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ನಾನು ನನ್ನ ರಾಜೀನಾಮೆಯನ್ನು ರಾಜ್ಯಸಭೆ ಸಭಾಪತಿ ದಂಖರ್ ಅವರಿಗೆ ಸಲ್ಲಿಸಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ ಎಂದು ಮಾಧ್ಯಮಗಾರರಿಗೆ ತಿಳಿಸಿದರು. ಬೇರೆ ಯಾವುದೇ ಪಕ್ಷಕ್ಕೆ ಸೇರಲ್ಲ. ರಾಜಕೀಯ ತೊರೆಯುತ್ತಿದ್ದೇನೆ. ನಾನು ಯಾವುದೇ ಸ್ಥಾನ, ಲಾಭ ಅಥವಾ ಹಣಕ್ಕಾಗಿ ರಾಜೀ ನಾಮೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಯಾವುದೇ ಒತ್ತಡವಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಶುಕ್ರವಾರ ವಿಜಯಸಾಯಿ ರೆಡ್ಡಿ ಘೋಷಿಸಿದ್ದರು. ರಾಜ್ಯಸಭಾ ಸದಸ್ಯತ್ವದಲ್ಲಿ 6 ವರ್ಷಗಳ ಅವಧಿಗೆ ಇನ್ನೂ ಮೂರುವರೆ ವರ್ಷಗಳು ಬಾಕಿ ಉಳಿದಿದ್ದರೂ, ವೈಯಕ್ತಿಕ ಕಾರಣಗಳಿಗಾಗಿ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿರುವುದಾಗಿ ವೈಎಸ್‌ಆರ್‌ಸಿಪಿ ನಾಯಕ ವಿಜಯಸಾಯಿ ರೆಡ್ಡಿ ಮಾಧ್ಯಮಗಾರರಿಗೆ ತಿಳಿಸಿದರು.