ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್ ಗೆ ಆಹ್ವಾನ…

54
firstsuddi

ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಅವರಿಗೆ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಜನವರಿ 22 ರಂದು ನಡೆಯಲಿರುವ ಉದ್ಘಾಟನೆಗೆ ಕುಟುಂಬ ಸಮೇತ ಬರುವಂತೆ, ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ನೀಡಲಾಗಿದೆ.

ಈ ಹಿಂದೆ ರಿಷಬ್ ಶೆಟ್ಟಿ ಅವರಿಗೂ ಆಹ್ವಾನ ನೀಡಲಾಗಿದೆ. ಅಲ್ಲದೇ, ಯಶ್ ಅವರಿಗೂ ಬರುವಂತೆ ಆಹ್ವಾನ ನೀಡಲಾಗಿದೆಯಂತೆ. ಕನ್ನಡ ಸಿನಿಮಾ ರಂಗದ ಬೆರಳೆಣಿಕೆಯ ಕಲಾವಿದರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ.