ರಾಷ್ಟ್ರೀಯತೆ ನಮ್ಮ ಪ್ರೇರಣೆ, ಆಡಳಿತ ನಮ್ಮ ಗುರಿ : ನರೇಂದ್ರ ಮೋದಿ…

203
firstsuddi

ನವದೆಹಲಿ : ಲೋಕಸಭಾ ಚುನಾವಣಾ ಹಿನ್ನೆಲೆ, ಇಂದು ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ, ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಸಹಕಾರ ಹಾಗೂ ಬೆಂಬಲಕ್ಕೆ ಧನ್ಯವಾದಗಳು. ಜನರ ಆಸೆ ಆಕಾಂಕ್ಷೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ನಿರಂತರ ಶ್ರಮದ ಪ್ರತಿಫಲವೇ ಈ “ ಸಂಕಲ್ಪ್ ಪತ್ರ “ ಜನರ ಸಹಕಾರದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ. ನಾವು 75 ವರ್ಷಕ್ಕೆ 75 ಭರವಸೆಗಳನ್ನು ಇಟ್ಟುಕೊಂಡು ಹೊರಟಿದ್ದೇವೆ. ಪ್ರಜಾಪ್ರಭುತ್ವಕ್ಕೆ ಗೌರವ ನೀಡುತ್ತಾ ಮುನ್ನಡೆಯುತ್ತಿದ್ದೇವೆ. ರಾಷ್ಟ್ರೀಯತೆ ನಮ್ಮ ಪ್ರೇರಣೆ, ಆಡಳಿತ ನಮ್ಮ ಗುರಿ. ಒನ್ ಮಿಷನ್, ಒನ್ ಡೈರೆಕ್ಷನ್ ಎಂಬುವುದು ನಮ್ಮ ಮಂತ್ರವಾಗಿದೆ. ನಾವು ಪ್ರತ್ಯೇಕ ಜಲ ಶಕ್ತಿ ಸಚಿವಾಲಯವನ್ನು ರಚಿಸುತ್ತೇವೆ. 2022ರಲ್ಲಿ ನಮ್ಮ ಕೆಲಸದ ಲೆಕ್ಕವನ್ನು ಜನರಿಗೆ ನೀಡುತ್ತೇವೆ. ನದಿ ನೀರನ್ನು ಸಮಗ್ರವಾಗಿ ಬಳಸಿಕೊಳ್ಳುವ ಸಲುವಾಗಿ ಕೆಲಸ ಮಾಡುತ್ತೇವೆ. ಮೀನುಗಾರರಿಗೂ ಕೂಡಾ ಪ್ರತ್ಯೇಕ ಸಚಿವಾಲಯವನ್ನು ರಚಿಸಿಕೊಡುತ್ತೇವೆ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.