ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆ, ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರು ಸೇರಿ “ಸಂಕಲ್ಪ್ ಪತ್ರ” ಎಂಬ ಹೆಸರಿನಲ್ಲಿ 48 ಪುಟಗಳ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಬಳಿಕ ಭಾಷಣ ಮಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇದರಲ್ಲಿ ನಾವು ಪ್ರಮುಖ ಭರವಸೆಗಳನ್ನು ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
* ಕೃಷಿ ಮತ್ತು ಗ್ರಾಮೀಣ ಕ್ಷೇತ್ರಕ್ಕೆ 25 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು.
* 2020ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು.
* ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲಾಗುವುದು.
* ಸಂವಿಧಾನದ 35ಎ ವಿಧಿ ರದ್ದುಪಡಿಸಲಾಗುವುದು.
* ರಾಮಮಂದಿರ ನಿರ್ಮಾಣಕ್ಕೆ ಎಲ್ಲಾ ರೀತಿಯ ಪ್ರಯತ್ನ.
* ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
* ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಭನೆ.
* ಜಿಎಸ್‍ಟಿ ಮತ್ತಷ್ಟು ಸರಳೀಕರಣ.
* 2020ರ ವೇಳೆಗೆ ರೈಲ್ವೇ ಮಾರ್ಗಗಳ ವಿದ್ಯುದೀಕರಣ.
* ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ.
* 60 ವರ್ಷ ದಾಟಿದ ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ.
* 60 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.
* ದೇಶದಲ್ಲಿ ಸಾಮಾಜಿಕ ನ್ಯಾಯ ಜಾರಿಗೆ ಪ್ರಯತ್ನ.
* ಎಲ್ಲರಿಗೂ ಸ್ವಂತ ಮನೆ ಹಾಗೂ ಅಡುಗೆ ಸಿಲಿಂಡರ್ ವಿತರಣೆ.
* ರೈತರ ಕುಟುಂಬಕ್ಕೆ ವರ್ಷಕ್ಕೆ 6000 ರೂ ನೀಡುವುದು.
* ರೈತರಿಗೆ ಬಡ್ಡಿ ರಹಿತ ಸಾಲ.
* ಕೃಷಿ ಉಗ್ರಾಣ ಸಂಸ್ಥೆ ಸ್ಥಾಪನೆ.
* 5 ಕಿಲೋ ಮೀಟರ್ ದೂರದಲ್ಲಿ ಒಂದು ಬ್ಯಾಂಕ್ ಶಾಖೆ ವ್ಯವಸ್ಥೆ.
* ದೇಶಕ್ಕೆ ಬರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
* ಕಾಶ್ಮೀರಕ್ಕೆ ಪಂಡಿತರು ವಾಪಾಸ್ ಆಗುವಂತೆ ಕ್ರಮ.
* ಗಂಗಾ ನದಿಯ ಶುದ್ಧೀಕರಣ.
* ಬೇನಾಮಿ ಆಸ್ತಿ ಹೊಂದಿರುವವರ ಬಗ್ಗೆ ಕಠಿಣ ಕ್ರಮ.
* ಪ್ರತಿ ಗ್ರಾಮದಲ್ಲೂ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ.
* ಭಾರತವನ್ನು ಜಾಗತಿಕ ತಯಾರಿಕ ಹಬ್ ಆಗಿ ಪರಿವರ್ತನೆ.
* ವಿದೇಶದಲ್ಲಿ ಇರುವ ಅಕ್ರಮ ಬ್ಯಾಂಕ್ ಖಾತೆಯ ವಿರುದ್ಧ ಕ್ರಮ.
* ಭೂದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು.
* ಸ್ಮಾರ್ಟ್ ಆಪ್‍ಗಳಿಗೆ 20ಸಾವಿರ ಕೋಟಿ ರೂ ವೆಚ್ಚ.
* ರೈಲ್ವೇ ನಿಲ್ದಾಣದ ಆಧುನೀಕರಣ ಹಾಗೂ ವೈಫೈ ಸೌಲಭ್ಯ ಹೊದಕಿಸುವುದು.
* ಮೀನುಗಾರಿಕೆಗೆ “ ಮತ್ಸ್ಯ ಸಂಪದ “ ಯೋಜನೆ ಜಾರಿ-10 ಕೋಟಿ ರೂ ವೆಚ್ಚ.
* ವಿದೇಶಕ್ಕೆ ಪರಾರಿಯಾಗಿರುವ ಆರ್ಥಿಕ ಆರೋಪಿಯನ್ನು ಕರೆತರುವ ಪ್ರಯತ್ನವನ್ನು ಚುರುಕುಗೊಳಿಸುವುದು.










