ಫಸ್ಟ್ ಸುದ್ದಿ-ನೀವು ಚುನಾವಣೆ ರಜೆಯಲ್ಲಿ ವೀಕೆಂಡ್ ಪ್ಲಾನ್ ಮಾಡಿದ್ದರೆ ಈ ಸಲ ಡಿಸಾಪಾಯಿಂಟ್ ಗ್ಯಾರಂಟಿ ಲೋಕಸಭಾ ಚುನಾವಣೆ 2019ರ ಹಿನ್ನೆಲೆ, ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಸಹ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಚುನಾವಣಾ ಆಯೋಗ ಆದೇಶ ಹೊರಡಿಸಿರುವುದರಿಂದ ದಿನಾಂಕ 16/04/2019 ರಿಂದ 19/04/2019 ರವರೆಗೆ ಚಿಕ್ಕಮಗಳೂರು, ಕೊಡಗು, ಸಕಲೇಶ್‍ಪುರ ಗಳಲ್ಲಿ ಹೋಂಸ್ಟೇ/ ಲಾಡ್ಜ್/ ಕ್ಲಬ್/ ರೆಸಾರ್ಟ್ ಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯ ಮಾಡಲು ಅವಕಾಶ ನೀಡದಂತೆ ಚುನಾವಣಾ ಆಯೋಗ ಆದೇಶಿಸಿದ್ದು, ಅದರಂತೆ 16/04/2019 ರಿಂದ 19/04/2019 ರವರೆಗೆ ಪ್ರವಾಸಿಗರಿಗೆ ವಾಸ್ತವ್ಯ ಅವಕಾಶ ನಿಷೇಧಿಸಿದೆ.










