ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ಗೆ ಹೆಚ್ಚಿದ ಆತಂಕ- ಎ2ನಿಂದ ಎ1 ಮಾಡಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ…

54
firstsuddi

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಈವರೆಗೂ ದರ್ಶನ್ ಎರಡನೇ ಆರೋಪಿ (ಎ2) ಆಗಿದ್ದರು. ನಟಿ ಪವಿತ್ರಾ ಗೌಡ ಎ1 ಆಗಿದ್ದರು. ಆದರೆ ಈಗ ನಗರದ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದ್ದು, ದರ್ಶನ್ ಅವರನ್ನು ಎ1 ಮಾಡುವುದು ಬಹುತೇಕ ಖಚಿತ ಎಂಬ ಮಾಹಿತಿ ಸಿಕ್ಕಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್ ಬೆಳಕಿಗೆ ಬಂದು, ಪೊಲೀಸರು ತನಿಖೆ ಆರಂಭಿಸಿದಾಗ ದರ್ಶನ್ ಅವರನ್ನು ಎ2 ಎಂದು ಪರಿಗಣಿಸಲಾಗಿತ್ತು. ಪವಿತ್ರಾ ಗೌಡ ಅವರ ಕಾರಣದಿಂದಲೇ ಕೊಲೆ ನಡೆದಿರುವ ಶಂಕೆ ಇರುವುದರಿಂದ ಆಕೆ ಎ1 ಆಗಿದ್ದರು. ಆದರೆ ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕ್ಕವು. ದರ್ಶನ್ ಅಣತಿಯಂತೆ ಅಪಹರಣ ನಡೆಸಿ, ನಂತರ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ. ಹತ್ಯೆ ಬಳಿಕ ಶವ ವಿಲೇವಾರಿಗೆ ದರ್ಶನ್ ಹಣ ಕೊಟ್ಟಿದ್ದು ಕೂಡ ತಿಳಿದು ಬಂದಿದೆ.

ಈ ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಇರುವುದರಿಂದ ಅವರೇ ಈ ಕೇಸ್​ನಲ್ಲಿ ಎ1 ಆಗುವ ಸಾಧ್ಯತೆ ದಟ್ಟವಾಗಿದೆ. ಎ2ನಿಂದ  ಎ1 ಮಾಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಇದು ಖಚಿತವಾದರೆ ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಅವರೇ ಸೂತ್ರಧಾರ ಎಂಬುದು ಖಚಿತವಾಗಲಿದೆ. ಇದರಿಂದ ನಟನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.