ಲಡಾಕ್ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದ ಚೀನಿ ಸೈನಿಕನನ್ನು ವಶಕ್ಕೆ ಪಡೆದ ಭಾರತೀಯ ಸೈನಿಕರು…

151
firstsuddi

ಲಡಾಕ್ : ಲಡಾಕ್ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಸೇನೆಗೆ ಸಂಬಂಧಿಸಿದ ದಾಖಲೆಗಳನ್ನು ಕೊಂಡೊಯ್ಯುತ್ತಿದ್ದ ಚೀನಾ ಸೈನಿಕನನ್ನು ಭಾರತೀಯ ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸೈನಿಕ ಲಡಾಖ್ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಭಾರತೀಯ ನಾಗರೀಕ ಹಾಗೂ ಸೇನೆಗೆ ಸಂಬಂಧಿಸಿದ ದಾಖಲೆಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಲಡಾಕ್‍ನ ಡೆಮ್ಚೋಕ್ ಬಳಿ ಭಾರತೀಯ ಸೈನಿಕರು ಚೀನಾ ಸೈನಿಕನನ್ನು ವಶಕ್ಕೆ ಪಡೆದು ಸೈನಿಕನ ಬಳಿ ಇದ್ದ ದಾಖಲೆಗಳನ್ನೂ ಕೂಡಾ ವಶಕ್ಕೆ ಪಡೆದುಕೊಂಡಿದ್ದು, ಸೈನಿಕನ ವಿಚಾರಣೆ ಹಾಗೂ ಶಿಷ್ಟಾಚಾರಗಳನ್ನು ಮುಗಿಸಿದ ಬಳಿಕ ಪ್ರೋಟೋಕಾಲ್ ಮೂಲಕ ಚೀನಾ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಭಾರತ ತಿಳಿಸಿದೆ.