ಲಾರಿಗೆ ಆಕಸ್ಮಿಕ ಬೆಂಕಿ : ಚಾಲಕ ಲಾರಿಯೊಳಗೆ ಸುಟ್ಟು ಭಸ್ಮ…

178
Firstsuddi

ಹಾಸನ : ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಚಾಲಕ ಸುಟ್ಟು ಭಸ್ಮವಾಗಿರುವ ಘಟನೆ ಹಾಸನದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ನಡೆದಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ಲಾರಿಯೊಳಗೆ ಸುಟ್ಟು ಹೋಗಿದ್ದಾನೆ.

ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ವೇಳೆ ಚಾಲಕ ಲಾರಿಯಲ್ಲಿದ್ದ ವಿಚಾರ ಗೊತ್ತಾಗಿದೆ. ತಕ್ಷಣ ಲಾರಿಯ ಗಾಜು ಒಡೆದು ಹಾಕಿ ಚಾಲಕನನ್ನು ರಕ್ಷಣೆ ಮಾಡುವುದರೊಳಗೆ ಆತ ಸುಟ್ಟು ಕರಕಲಾಗಿದ್ದಾನೆ. ಹಾಸನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.