ಲಿವಿಂಗ್ ರಿಲೇಶನ್​ಶಿಪ್, 14 ಬಾರಿ ಗರ್ಭಪಾತ – ಮನನೊಂದು ಮಹಿಳೆ ಆತ್ಮಹತ್ಯೆ…

73
firstsuddi

ನವದೆಹಲಿ : ಕಳೆದ ಎಂಟು ವರ್ಷಗಳಿಂದ ಲಿವಿಂಗ್ ರಿಲೇಶನ್​ಶಿಪ್​ನಲ್ಲಿದ್ದು, 14 ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 33 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 5 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಜುಲೈ 5 ರಂದು ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ಮಹಿಳೆಯ ಬಟ್ಟೆಯಿಂದ ಸೂಸೈಡ್ ನೋಟ್ ಸಿಕ್ಕಿದೆ. ಆತ್ಮಹತ್ಯೆ ಪತ್ರದಲ್ಲಿ ಮಹಿಳೆ ಕಳೆದ 8 ವರ್ಷಗಳ ದುರಂತವನ್ನು ಬರೆದಿದ್ದಾಳೆ.

ಡೆತ್‍ನೋಟ್‍ನಲ್ಲಿ ಏನಿದೆ? 
ನಾನು 8 ವರ್ಷಗಳಿದ್ದ ಆತನನ್ನು ಪ್ರೀತಿಸುತ್ತಿದ್ದೆ. ಲಿವಿಂಗ್ ರಿಲೇಶನ್​ಶಿಪ್​ನಲ್ಲಿ ಇದ್ವಿ. ಮೊದ ಮೊದಲು ಎಲ್ಲವೂ ಚೆನ್ನಾಗಿ ಇತ್ತು. ಅವನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಮದುವೆಯಾಗುವುದಾಗಿ ಸಹ ಹೇಳಿದ್ದ. ಅವನ ಮಾತು ನಂಬಿ ನಾನು ಆತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೆ. 14 ಬಾರಿ ಗರ್ಭಿಣಿಯಾಗಿದ್ದೆ. ನಾನು ಮಗು ಮಾಡಿಕೊಳ್ಳೋಣ, ಮದುವೆಯಾಗು ಅಂತ ಎಷ್ಟೋ ಬಾರಿ ಕೇಳಿದೆ. ಅವನು ಒಪ್ಪದೇ 14 ಬಾರಿಯೂ ಗರ್ಭಪಾತ ಮಾಡಿಸಿದ್ದ. ದಿನವೂ ನನಗೆ ಚಿತ್ರಹಿಂಸೆ ನೀಡುತ್ತಿದ್ದ. ಕೊನೆಗೆ ಮದುವೆಯೂ ಆಗದೇ ನನ್ನ ಬಿಟ್ಟು ಹೋದ. ಅದಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ರೂಮ್ ನಲ್ಲಿದ್ದ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೇ ಪ್ರಾಥಮಿಕ ತನಿಖೆ ವೇಳೆ ಮಹಿಳೆ ಮೊದಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ಲು. ಆಕೆ ತನ್ನ ಪ್ರಿಯಕರನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಳು ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

14 ಬಾರಿ ಗರ್ಭಪಾತ ಮಾಡಿಸಿದ ಆರೋಪಿಯೂ ನೋಯ್ಡಾದಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ಮಾಡಿರುವ ಕೃತ್ಯಕ್ಕೆ 306, 376, 313ರ ಅಡಿ ಆತ್ಮಹತ್ಯೆಗೆ ಪ್ರಚೋದನೆ, ರೇಪ್ ಕೇಸ್ ದಾಖಲಾಗಿದೆ. ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.