ಲೋಕಸಭಾ ಉಪ ಚುನಾವಗೆ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ಮತ ಪ್ರಚಾರ.

36

ವಯಾನಾಡು: ವಯನಾಡಿನ ಲೋಕಸಭಾ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ಇಂದಿನಿಂದ ಎರಡು ದಿನಗಳ ಕಾಲ ವಯನಾಡಿನಲ್ಲಿ ಭರ್ಜರಿ ಮತ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಅನೇಕ ಪ್ರಚಾರ ಸಭೆ, ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದು, ಮತದಾರರನ್ನು ಸೆಳೆಯುವ ಕೆಲಸ ಮಾಡಲಿದ್ದಾರೆ. ವಯನಾಡಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಿಯಾಂಕಾ, ಇಂದು ನೀಲಿಗಿರಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‍ನಿಂದ ತಮ್ಮ ಪ್ರಚಾರ ಆರಂಭಿಸಲಿದ್ದಾರೆ. ಸುಲ್ತಾನ್ ಬಥೇರಿ ವಿಧಾನಸಭಾ ಕ್ಷೇತ್ರದಲ್ಲಿನ ಮೀನಂಗಡಿಯಲ್ಲಿ ಮೊದಲ ಸಭೆ ನಡೆಸಲಿದ್ದಾರೆ. ಇದಾದ ಬಳಿಕ 2.30ಕ್ಕೆ ಅವರು ಮಾನಂತವಾಡಿ ವಿಧಾನಸಭಾ ಕ್ಷೇತ್ರದ ಪನಮರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಸಂಜೆ 4.30ಕ್ಕೆ ಕಲ್ಪೆಟ್ಟ ಕ್ಷೇತ್ರದ ಪೊಝುತಾನದಲ್ಲಿ ಅವರು ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುವ ಮೂಲಕ ಇಂದಿನ ಪ್ರಚಾರ ಮುಗಿಸಲಿದ್ದಾರೆ.
ಮಂಗಳವಾರದಂದು ಎರಡನೇ ದಿನದ ಪ್ರಚಾರದದಲ್ಲಿ ಬೆಳಗ್ಗೆ 9.30ಕ್ಕೆ ತಿರುವಮಂಬಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ. ನಂತರ ಎಂಗಪುಝದಲ್ಲಿ ಪ್ರಚಾರ ನಡೆಸಿ ಮಧ್ಯಾಹ್ನ 12.30ಕ್ಕೆ ಈರೋಡ್‍ನಲ್ಲಿ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ತೆರಟ್ಟಮ್ಮಲ್‍ನಲ್ಲಿ ಮತಯಾಚಿಸಲಿದ್ದಾರೆ ಮಧ್ಯಾಹ್ನ 3ಗಂಟೆಗೆ ವಂಡೂರ್ ಮತ್ತು ಮಂಪಾಡ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು ಸಂಜೆ 4.30ಕ್ಕೆ ನೀಲಂಬೂರ್‍ನಲ್ಲಿ ಸಭೆ ಮುಕ್ತಾಯದ ಬಳಿಕ ಅವರು ಚುಂಗತರಾ ಕಡೆಗೆ ಸಾಗಲಿದ್ದಾರೆ. ವಯನಾಡು ಲೋಕಸಭಾ ಕ್ಷೇತ್ರಕ್ಕೆ ಯುಡಿಎಫ್ ಅಭ್ಯರ್ಥಿಯಾಗಿ ಪ್ರಿಯಾಂಕಗಾಂಧಿ ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇನ್ನು, ಈ ಎರಡು ದಿನದ ಪ್ರಚಾರ ಸಭೆಯಲ್ಲಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಯುಡಿಎಫ್‍ನ ನಾಯಕರು ಸಾಥ್ ನೀಡಲಿದ್ದಾರೆ.