ಮೂಡಿಗೆರೆ: ತುಮಕೂರು ವಕೀಲರಾದ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮೂಡಿಗೆರೆ ವಕೀಲರ ಸಂಘದ ವತಿಯಿಂದ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮೂಡಿಗೆರೆ ವಕೀಲ ಸಂಘದ ಅಧ್ಯಕ್ಷ ಬಿ.ಟಿ.ನಟರಾಜ್ ಮಾತನಾಡಿ ವಕೀಲ ರವಿ ಜಮೀನಿನಲ್ಲಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಹಾಕಲು ಬಂದಿದ್ದ ಸಂಧರ್ಭದಲ್ಲಿ ಈ ಘಟನೆ ನಡೆದಿದ್ದು ಈ ವೇಳೆ ವಕೀಲ ನೋಟಿಸ್ ಮತ್ತು ಪರಿಹಾರ ನೀಡದೆ ಹೇಗೆ ಕಂಬ ಅಳವಡಿಸುತ್ತಿದ್ದೀರಾ ಎಂದು ವಿರೋಧಿಸಿದ್ದಾರೆ. ಈ ವೇಳೆ ತುಮಕೂರು ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರು ವಕೀಲರಾದ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದು ಸರಿಯಲ್ಲ. ಮೂಡಿಗೆರೆ ವಕೀಲರ ಸಂಘ ಇದನ್ನು ಖಂಡಿಸುತ್ತದೆ. ಹಲ್ಲೆ ನಡೆಸಿದ ಅಧಿಕಾರಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದ ವಿವಿಧೆಡೆ ವಕೀಲರ ಮೇಲೆ ವಿನಾಕಾರಣ ಹಲ್ಲೆ ನಡೆಸಲಾಗುತ್ತಿದ್ದು ಈ ಬಗ್ಗೆ ಮೇಲಾಧಿಕಾರಿಗಳು ಹಾಗೂ ಸರ್ಕಾರ ಕಟ್ಟು ನಿಟ್ಟಿನ ಕ್ರಮ ವಹೀಸಬೇಕು ಎಂದರು. ಈ ಸಂಧರ್ಭದಲ್ಲಿ ಮೂಡಿಗೆರೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಚಂದ್ರು, ಜಂಟಿ ಕಾರ್ಯದರ್ಶಿ ರಿಜ್ವಾನ್ ಅಲಿ, ಸದಸ್ಯರುಗಳಾದ ಬಿ.ಎಸ್.ಸುರೇಶ್, ಪ್ರತಾಪ್ ಇದ್ದರು.