ಪೊಲೀಸ್ ಅಧಿಕಾರಿಗಳು ವಾಟ್ಸ್ಆ್ಯಪ್ ಡಿಪಿಗೆ ಫೋಟೋ ಹಾಕುವಂತಿಲ್ಲ : ಆಗ್ನೇಯ ವಿಭಾಗ ಡಿಸಿಪಿ ಸೂಚನೆ…

49
firstsuddi

ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ತಮ್ಮ ಕಟ್ಟುನಿಟ್ಟಿನ ಕ್ರಮ ಮತ್ತು ವಿನೂತನ ಪ್ರಯತ್ನಗಳ ಮೂಲಕ ಸುದ್ದಿಯಲ್ಲಿರುವ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಆಗ್ನೇಯ ವಿಭಾಗದ ಪೊಲೀಸ್ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಗೆ ಬರುವ ಕರೆಗಳನ್ನು ಸ್ವೀಕರಿಸದೆ ಇರುವಂತಿಲ್ಲ. ಕರೆ ಸ್ವೀಕರಿಸದೆ ಇದ್ದಲ್ಲಿ ಸಂಕಷ್ಟ ಉಂಟಾಗಲಿದೆ. ಜೊತೆಗೆ ವಾಟ್ಸ್ ಆ್ಯಪ್ ಡಿಪಿಗೆ ತಮ್ಮ ಫೋಟೋ ಸೇರಿದಂತೆ ಬೇರೆ ಯಾವುದೆ ಪಿಕ್ಚರ್ ಹಾಕುವಂತಿಲ್ಲ ಎಂದು ಡಿಸಿಪಿ ಸಿಕೆ ಬಾಬಾ ಖಡಕ್ ಸೂಚನೆ ನೀಡಿದ್ದಾರೆ.

ಇನ್ಮುಂದೆ ಎಲ್ಲ ಪೊಲೀಸರು ಲೋಕ ಸ್ಪಂದನ ಎಂಬ ಕ್ಯೂ ಆರ್ ಕೋಡ್ ಅನ್ನು ತಮ್ಮ ಡಿಪಿಗೆ ಹಾಕಬೇಕು. ಕ್ಯೂ ಆರ್ ಕೋಡ್ ಬಿಟ್ಟು ಯಾವುದೇ ಫೋಟೋಗಳನ್ನು ಹಾಕೋ ಹಾಗಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪೊಲೀಸ್ ಆಫೀಸರ್ ಗಳು ಫೋನ್ ಕಾಲ್ ರಿಸೀವ್ ಮಾಡಿಲ್ಲ ಅಂದ್ರೆ ಸಾರ್ವಜನಿಕರು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ನಿಮ್ಮ ಅಧಿಕಾರಿ ಫೋನ್ ರೀಸಿವ್ ಮಾಡುತ್ತಿಲ್ಲ ಅಂತಾ ಸ್ಕ್ಯಾನ್ ಮಾಡಿ ಮೇಸೆಜ್ ಮಾಡಿದ್ರೆ, ಸೀದಾ ಡಿಸಿಪಿ ಮೊಬೈಲ್ ಗೆ ಮೆಸೇಜ್ ಬರುತ್ತೆ. ಆಗ ಯಾವ ಅಧಿಕಾರಿ ಕಾಲ್ ರಿಸೀವ್ ಮಾಡಿಲ್ಲ ಅನ್ನೋ ಬಗ್ಗೆ ಡಿಸಿಪಿಗೆ ತಿಳಿಯುತ್ತೆ. ಇದರಿಂದ ಯಾವ ಅಧಿಕಾರಿ ಜನರಿಗೆ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನ ಪತ್ತೆ ಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ. ಲೋಕ ಸ್ಪಂದನ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೊಸ ಯೋಜನೆ ರೂಪಿಸಿದ್ದಾರೆ. ಅಲ್ಲದೇ ಇಂದಿನಿಂದಲೇ ಈ ನೂತನ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಈ ಹೊಸ ಯೋಜನೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂದು ಕಾದುನೋಡಬೇಕಿದೆ.