ವಾರ್ಷಿಕ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಗೆ ಸಿಂಗಟಗೆರೆ ಶಶಿ ಆಯ್ಕೆ…

60
firstsuddi

ಚಿಕ್ಕಮಗಳೂರು:- ಕುಂದೂರು ಭದ್ರಮ್ಮ ಕಲ್ಲೇಗೌಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೀಡಲಾಗುವ ವಾರ್ಷಿಕ ಕುಂಭಕ ಸಾಹಿತ್ಯ ಸಿರಿ ಪ್ರಶಸ್ತಿಗೆ ಸಿಂಗಟಗೆರೆ ಶಶಿ ಪಾತ್ರರಾಗಿದ್ದಾರೆ.

ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರು ಬಹುಮುಖ ಪ್ರತಿಭೆಯ ಲೇಖಕ ಹಾಗೂ ಕಲಾವಿದ ಎಂಎ ಬಿಇಡಿ ಹಾಗೂ ಡಿಪ್ಲೋಮಾ ಇನ್ ಫಿಲ್ಮ್ ಟೆಕ್ನಾಲಜಿ ವ್ಯಾಸಂಗ ಮಾಡಿರುವ ಶಶಿ ಅವರು ಹನಿಗವನಗಳು ಕಥಾ ಸಂಕಲನಗಳು ಲಲಿತ ಪ್ರಬಂಧ ಕಿರು ಚಿತ್ರಗಳಿಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಅನೇಕ ಭಕ್ತಿ ಗೀತೆಗಳು ಮತ್ತು ಭಾವಗೀತೆಗಳನ್ನು ರಚಿಸಿ ರಾಗ ಸಂಯೋಜನೆ ಮಾಡಿ ಧ್ವನಿ ಸುರುಳಿ ಹೊರತಂದಿದ್ದಾರೆ.

ಪತ್ರಿಕೆಗಳಲ್ಲಿ ಪದಬಂಧ ರಚನೆಕಾರರು ಹಾಗೂ ಖಾಯಂ ಅಂಕಣಕಾರರಾಗಿರುವ ಶಶಿ ಅವರಿಗೆ ಕಡೂರು ತಾಲೂಕಿನ ಸಿಂಗಟಗೆರೆಯಲ್ಲಿ ಫೆ 3 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.