ವಾರ್ಷಿಕ ಚಂಪಾ ಶಷ್ಟಿ ಉತ್ಸವ: ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ…

96
firstsuddi

ಚಿಕ್ಕಮಗಳೂರು: ನಗರದ ಶ್ರೀ ಕಾಮಧೇನು ಗಣಪತಿ ಕ್ಷೇತ್ರದಲ್ಲಿ ವಾರ್ಷಿಕ ಚಂಪಾ ಶಷ್ಟಿ ಉತ್ಸವ ನೂರಾರು ಭಕ್ತರ ನಡುವೆ ಇಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಚಂಪಾ ಶಷ್ಟಿ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಕ್ಷೀರಾಭಿಷೇಕ ಪವಮಾನ ಅಭಿಷೇಕ ವಿಶೇಷ ಪೂಜೆ ಅಲಂಕಾರ ಜರುಗಿತು. ನಂತರ 13 ವಟುಗಳಿಗೆ ಪಾದಪೂಜೆ ವಸ್ತ್ರ ತಾಂಬೂಲ ಸಮರ್ಪಿಸಿ ಹಸ್ತೋದಕ ಹಾಕಲಾಯಿತು. ಈ ವೇಳೆ ನೂರಾರು ಭಕ್ತರು ವಟುಗಳಿಗೆ ಕಾಣಿಕೆ ಸಮರ್ಪಿಸಿ ನಮಸ್ಕರಿಸಿ ಭಕ್ತಿ ಭಾವ ಮೆರೆದರು.

ಮಹಾ ಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಪ್ರಧಾನ ಅರ್ಚಕ ರಘುನಾಥ ಅವಧಾನಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.