ಮೈಸೂರು: ಜಿಲ್ಲೆಯ ಕೆ.ಆರ್. ನಗರ ಕ್ಷೇತ್ರದ ಸರಕಾರಿ ಕಾಲೇಜಿನ ಹೆಚ್ಚುವರಿ ಕಟ್ಟಡ ತಡವಾಗಿ ಉದ್ಘಾಟನೆ ಆದ ಹಿನ್ನೆಲೆ ವಿದ್ಯಾರ್ಥಿಯೊಬ್ಬ ಶಾಸಕರ ಕಾರ್ಯ ವೈಖರಿ ಬಗ್ಗೆ ಅವಹೇಳಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ವಿದ್ಯಾರ್ಥಿಯ ಅವಾಚ್ಯ ಶಬ್ದಗಳ ಪೋಸ್ಟ್‌ಗೆ ಶಾಸಕ ಸಾರಾ ಮಹೇಶ್ ಕಾಲೇಜು ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಭಾವುಕರಾಗಿದ್ದಾರೆ.
ಕಟ್ಟಡ ಉದ್ಘಾಟನೆ ಕಾರ್ಯಕ್ರಮ ತಡವಾಗಿ ನಡೆದಿರುವುದರಿಂದ, ಆ ವಿದ್ಯಾರ್ಥಿ ನನ್ನನ್ನು ಅತಿ ಕೆಟ್ಟ ಪದಗಳಿಂದ ನಿಂದಿಸಿರುವುದು ನನಗೆ ಬಹಳ ನೋವುಂಟು ಮಾಡಿದೆ. ತಾಲೂಕಿನ ಅಭಿವೃದ್ಧಿಗಾಗಿ ಪ್ರತಿ ನಿತ್ಯ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗುವ ಮೂಲಕ ವಿದ್ಯಾರ್ಥಿಗಳ ರೀತಿ ಕೆಲಸ ಮಾಡುತ್ತಿದ್ದೇನೆ. ಇಷ್ಟೆಲ್ಲ ಕೆಲಸ ಮಾಡಿದ್ದೇನೆ. ಮನಃಸಾಕ್ಷಿ ಬೇಡ ನಿಮಗೆ ಎಂದು ಕಣ್ಣೀರು ಹಾಕಿದ್ದಾರೆ.










