ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸ- ಬಿಲ್ ಕಲೆಕ್ಟರ್​ಗೆ ಚಾಕು ಇರಿತ…

64
firstsuddi

ಕೊಡಗು: ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಮಾತಿನ ಚಕಮಕಿ ನಡೆದು ಬಿಲ್ ಕಲೆಕ್ಟರ್​ಗೆ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಬಾಣೆಯಲ್ಲಿ ನಡೆದಿದೆ.

ಕಾರ್ಯಪ್ಪ ಬಡಾವಣೆಯ ನಿವಾಸಿ ರತೀಶ್ ಎಂಬಾತ ಬಿಲ್ ಕಲೆಕ್ಟರ್ ಪ್ರಶಾಂತ್ ಎಂಬವರಿಗೆ ಚೂರಿ ಇರಿದಿದ್ದು, ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿದ್ಯುತ್ ಬಿಲ್ ಹೆಚ್ಚು ಬಂದಿರುವ ಹಿನ್ನೆಲೆಯಲ್ಲಿ ರತೀಶ್, ಬಿಲ್ ಕಲೆಕ್ಟರ್‌ನೊಂದಿಗೆ ಆಕ್ರೋಶಗೊಂಡಿದ್ದಾನೆ. ಈ ಸಂದರ್ಭ ಬಿಲ್ ಕಲೆಕ್ಟರ್ ಪ್ರಶಾಂತ್ ಇದಕ್ಕೆ ನಮಗೆ ಸಂಬಂಧ ಇಲ್ಲ. ಕಚೇರಿಗೆ ಹೋಗಿ ವಿಚಾರಿಸಿ ಎಂದಿದ್ದಾರೆ. ಹೀಗೆ ರತೀಶ್ ಹಾಗೂ ಬಿಲ್ ಕಲೆಕ್ಟರ್ ನಡುವೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾತುಗಳು ತಾರಕಕ್ಕೇರಿ ರತೀಶ್, ಬಿಲ್ ಕಲೆಕ್ಟರ್ ಪ್ರಶಾಂತ್‌ಗೆ ಚಾಕುವಿನಿಂದ ಇರಿದಿದ್ದಾನೆ.

ಆರೋಪಿ ರತೀಶ್ ತಲೆಮರೆಸಿಕೊಂಡಿದ್ದು, ಮಾದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.