ವಿದ್ಯುತ್ ಶಾಕ್‌ಗೆ ಬಾಲಕ ಬಲಿ…

50
firstsuddi

ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ವಿದ್ಯುತ್ ಶಾಕ್‌ಗೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ನಡೆದಿದೆ.

ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಈ ದುರ್ಘಟನೆ ನಡೆದಿದ್ದು, ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ ನಾಗೇಂದ್ರ (8) ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾನೆ.

ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್‌ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್‌ಫಾರ್ಮರ್ ಬದಿಯಲ್ಲಿ ಹೋಗುವಾಗ ಗ್ರೌಂಡಿಂಗ್ ವೈಯರ್ ತಗುಲಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.