ಚಿಕ್ಕಮಗಳೂರು: ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಶಿಕ್ಷಣವಂತರನ್ನು ಮಾತ್ರ ಸಮಾಜ ಗೌರವಿಸಿ ಆಧರಿಸುತ್ತದೆ ಎಂದು ಶಿಕ್ಷಣ ಇಲಾಖೆ ನೌಕರರ ಡಾ.ರಾಧಾಕೃಷ್ಣನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಲ್.ಜಿ.ಪರಮೇಶ್ವರಪ್ಪ ಹೇಳಿದರು. ನಗರದ ಬಸವನಹಳ್ಳಿಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಅವರು ಮಾತನಾಡಿದರು. ವಿದ್ಯೆ ಯಾರೂ ಕದಿಯಲಾಗದ ಆಸ್ತಿ. ವಿದ್ಯಾವಂತರಿಗೆ ಪ್ರಪಂಚದಲ್ಲೆಡೆ ಪುರಸ್ಕಾರ ಮನ್ನಣೆ ದೊರೆಯುತ್ತದೆ. ಬಡತನವೆಂಬ ಶತ್ರುವನ್ನು ಓಡಿಸಲು ಶಿಕ್ಷಣವೇ ಪ್ರಮುಖವಾದ ಅಸ್ತ್ರ ಎಂದ ಅವರು ಮಕ್ಕಳು ಇದನ್ನು ಮನಗಂಡು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಡಾ ರಾಧಾಕೃಷ್ಣನ್ ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1.17.861 ರೂ ನಿವ್ವಳ ಲಾಭಗಳಿಸಿದ್ದು ಅದರಲ್ಲಿ ಸದಸ್ಯರಿಗೆ ಶೇ ಆರರಷ್ಟು ಲಾಭಾಂಶ ನೀಡಲಾಗುವುದು ಎಂದು ತಿಳಿಸಿದರು. ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರನ್ನು ಸಂಘದಿಂದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಿರ್ದೇಶಕ ಸ್ವಾಮಿ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಸಿ.ಕೆ.ವಿಜಯಲಕ್ಷ್ಮಿ. ಕಾರ್ಯದರ್ಶಿ ಆರ್.ಬಸವ ಕುಮಾರ್. ನಿರ್ದೇಶಕರಾದ ಎಸ್.ಕೆ.ಕೃಷ್ಣಪ್ಪ. ಆರ್.ಲೀಲಾವತಿ. ಕೆ.ಲೋಕೇಶ್. ಹೆಚ್.ಜಿ.ಪ್ರಸನ್ನಕುಮಾರ್. ಆರ್.ರವಿ. ಬಸವರಾಜು ಕಡೂರು ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ವಿದ್ಯೆ ಯಾರೂ ಕದಿಯಲಾಗದ ಆಸ್ತಿ. ವಿದ್ಯಾವಂತರಿಗೆ ಪ್ರಪಂಚದಲ್ಲೆಡೆ ಪುರಸ್ಕಾರ ಮನ್ನಣೆ ದೊರೆಯುತ್ತದೆ: ಡಾ.ರಾಧಾಕೃಷ್ಣನ್.










