ನವದೆಹಲಿ : ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ಅನ್ನು ನಿನ್ನೆ ಭಾರತ್ ಬಯೋಟೆಕ್ ಸಂಸ್ಥೆ ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ನಿನ್ನೆ ಮೊದಲ ಕೋವಿಡ್ ಇಂಟ್ರಾನಾಸಲ್ ಲಸಿಕೆ (ಮೂಗಿನ ಮೂಲಕ ಹಾಕುವ ಲಸಿಕೆ) ಇನ್ಕೋವ್ಯಾಕ್ ( iNCOVACC ) ಬಿಡುಗಡೆ ಮಾಡಿದರು.
ಇದು ವಿಶ್ವದ ಮೊದಲ ಮೂಗಿನ ಲಸಿಕೆ. ಈ ಲಸಿಕೆಯನ್ನು ಭಾರತ್ ಬಯೋಟೆಕ್ ಮತ್ತು ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯ ಜಂಟಿಯಾಗಿ ತಯಾರಿಸಿದೆ. ಇದನ್ನು ಮೊದಲು BBV154 ಎಂದು ಕರೆಯಲಾಗಿತ್ತು. ಈಗ iNCOVACC ಎಂದು ಹೆಸರಿಸಲಾಗಿದ್ದು, ಲಸಿಕೆಯನ್ನು ಮೂಗಿನ ಮೂಲಕ ನೀಡಲಾಗುತ್ತದೆ.
ಈ ಲಸಿಕೆಯನ್ನು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ನೀಡಲಾಗುತ್ತದೆ. ಎರಡು ಡೋಸ್ ತೆಗೆದುಕೊಂಡವರು ಮಾತ್ರ ಲಸಿಕೆ ತೆಗೆದುಕೊಳ್ಳಬಹುದಾಗಿದೆ. ಇದು ಪ್ರಾಥಾಮಿಕ ಲಸಿಕೆಯ ಅನುಮೋದನೆಯನ್ನು ಸಹ ಪಡೆದುಕೊಂಡಿದೆ. ಅಂದರೆ ನೀವು ಯಾವದೇ ಲಸಿಕೆ ತೆಗೆದುಕೊಳ್ಳದಿದ್ದರೂ ಸಹ ಇದನ್ನು ಪಡೆಯಬಹುದಾಗಿದೆ.
ವೈದ್ಯರ ಪ್ರಕಾರ, ಮೂಗಿನ ಲಸಿಕೆ ಉತ್ತಮವಾಗಿದೆ. ಏಕೆಂದರೆ ಅದನ್ನು ಅನ್ವಯಿಸಲು ಸುಲಭ. ಇದು ಲೋಳೆಪೊರೆಯಲ್ಲಿಯೇ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಆರಂಭದಲ್ಲಿ ಸೋಂಕು ತಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಕೇಂದ್ರಗಳಲ್ಲಿ ಇದು ಲಭ್ಯವಿಲ್ಲ.
ಭಾರತದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆ ಪ್ರತಿ ಡೋಸ್ ಗೆ 325 ರೂಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ 800 ರೂ ಆಗಿದೆ. ಪ್ರಸ್ತುತ ಈ ಲಸಿಕೆಯನ್ನು ಕೋವಿನ್ ಪೋರ್ಟಲ್ ಮೂಲಕ ಮಾತ್ರ ಪಡೆಯಬಹುದಾಗಿದೆ.