ಶಾಲೆಗಳಿಗೆ ಬಾಂಬ್ ಬೆದರಿಕೆ: ವಿದ್ಯಾರ್ಥಿಯ ಬಂಧನ.

12
Terrorism and bomb threat concept with dynamite or TNT stick, alarm clock, black wires and a red duffle bag with dark dramatic lighting

ನವದೆಹಲಿ: ಪರೀಕ್ಷೆಗೆ ಹಾಜರಾಗಲು ಬಯಸದೇ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿ 23 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಮಾತನಾಡಿ, ಶಂಕಿತ ವಿದ್ಯಾರ್ಥಿ ದೆಹಲಿಯ 23 ಶಾಲೆಗಳಿಗೆ ಬೆದರಿಕೆ ಇಮೇಲ್‍ಗಳನ್ನು ಕಳುಹಿಸಿದ್ದ. ತಾನು ಈ ಹಿಂದೆ ಬೆದರಿಕೆ ಇಮೇಲ್‍ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಪ್ರಾಪ್ತ ಯುವಕ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ತಿರ್ಮಾನಿಸಿದ್ದ, ಈ ಹಿನ್ನೆಲೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದು, ಇದರಿಂದ ಪರೀಕ್ಷೆ ರದ್ದಾಗಲಿ ಎಂದು ಆತ ಬಯಸಿದ್ದ ಎಂದು ತಿಳಿಸಲಾಗಿದೆ. ನವೆಂಬರ್ 28 ರಂದು ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಅದಾದ ಒಂದು ದಿನದ ನಂತರ ಹಲವಾರು ಶಾಲೆಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದವು. ಜೊತೆಗೆ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್‍ಗೆ ಬೆದರಿಕೆ ಇಮೇಲ್ ಬಂದಿತ್ತು. ಪೊಲೀಸರ ವಿಚಾರಣೆಯ ವೇಳೆ ವಿದ್ಯಾರ್ಥಿಯೇ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಎಂದು ತಿಳಿಸಲಾಗಿದೆ.