ಶ್ರೀಕೃಷ್ಣನೂ ಅರ್ಜುನನಿಗೆ ಜಿಹಾದ್ ಬೋಧಿಸಿದ್ದಾನೆ : ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ…

54
firstsuddi

ನವದೆಹಲಿ : ಕುರಾನ್ ನಲ್ಲಿ ಮಾತ್ರವಲ್ಲದೇ ಭಗವದ್ಗೀತೆಯಲ್ಲಿಯೂ ಜಿಹಾದ್ ಪರಿಕಲ್ಪನೆಯ ಉಲ್ಲೇಖವಿದೆ. ಶ್ರೀಕೃಷ್ಣನೂ ಅರ್ಜುನನಿಗೆ ಜಿಹಾದ್ ಬೋಧಿಸಿದ್ದಾನೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ನ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್, ಸರಿಯಾದ ಉದ್ದೇಶ ಹೊಂದಿದ್ದರೂ, ಸರಿಯಾದ ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ವೇಳೆ ಜಿಹಾದ್ ಪರಿಕಲ್ಪನೆ ಹುಟ್ಟಿಕೊಳ್ಳುತ್ತದೆ. ಜಿಹಾದ್ ಇಸ್ಲಾಂ ಧರ್ಮದಲ್ಲಿ ಇದೆ ಎಂಬುದಾಗಿ ಭಾರೀ ಚರ್ಚೆಯಾಗುತ್ತಿದೆ. ಆದರೆ ಕುರಾನ್ ನಲ್ಲಿ ಮಾತ್ರವಲ್ಲ, ಮಹಾಭಾರತದ ಗೀತೆಯಲ್ಲೂ ಇದೆ, ಕ್ರಿಶ್ಚಿಯನ್ ಧರ್ಮದಲ್ಲೂ ಇದೆ. ಮಹಾಭಾರತದ ಭಗವದ್ಗೀತೆಯ ಭಾಗವೊಂದರಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಜಿಹಾದಿನ ಪಾಠಗಳನ್ನು ಬೋಧಿಸುತ್ತಾನೆ ಎಂದು ಹೇಳಿದ್ದಾರೆ.

ಶಿವರಾಜ್ ಪಾಟೀಲ್ ಅವರ ಜಿಹಾದಿ ಹೇಳಿಕೆಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ ಪಕ್ಷವು ಹಿಂದೂ ದ್ವೇಷಿ ಮತ್ತು ಶ್ರೀರಾಮನ ಅಸ್ತಿತ್ವವನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ವಾಗ್ದಾಳಿ ನಡೆಸಿದ್ದಾರೆ.