ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಮೈತ್ರಿ ನಾಯಕರು ಕಿಡಿಕಾರಿದ್ದಾರೆ.
ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅಶೋಕ್, ಡಿಕೆಶಿಗೆ ಸೋಲಿನ ಭೀತಿ ಕಾಡುತ್ತಿದೆ. ನಿನ್ನೆ ತಮಿಳುನಾಡು ದೇವಸ್ಥಾನಕ್ಕೆ ಹೋಗಿದ್ದರು. ಇವತ್ತು ಇಲ್ಲಿಗೆ ನಾವು ಬಂದಿದ್ದು ನೋಡಿ ಅವರಿಗೆ ಚಳಿ ಜ್ವರ ಬಂದಿದೆ. ಶ್ರೀಗಳ ಬಗ್ಗೆ ಮಾತನಾಡುವುದಕ್ಕೆ ಡಿಕೆಶಿಗೆ ನೈತಿಕತೆ ಇಲ್ಲ. ಸ್ವಾಮೀಜಿ ಬಗ್ಗೆ ಡಿಕೆಶಿ ಅಗೌರವವಾಗಿ ಮಾತಾಡಿದ್ದಾರೆ. ಸ್ವಾಮೀಜಿ ಬಗ್ಗೆ ಎಚ್ಚರಿಕೆಯಿಂದ ಡಿಕೆಶಿ ಮಾತಾಡಲಿ ಎಂದು ಹೇಳಿದರು.
ಡಿಕೆಶಿಗೆ ಕಷ್ಟ ಬಂದಾಗ, ಜೈಲಿಗೆ ಹೋಗಿ ಬಂದಾಗ ಸ್ವಾಮೀಜಿ ಸಂತೈಸಿದ್ರು. ಇದನ್ನ ಡಿಕೆಶಿ ಮರೆತಿದ್ದಾರಾ?. ಮಠವನ್ನ ರಾಜಕೀಯಕ್ಕೆ ಎಳೆದು ತಂದಿದ್ದು ಸರಿಯಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಹೆಚ್‍ಡಿಕೆ ಸರ್ಕಾರ ಬೀಳಿಸಿದ್ದ ಸಂದರ್ಭದಲ್ಲಿ ಹೆಚ್ಚಾಗಿ ಬಂದವರು ಕಾಂಗ್ರೆಸ್‍ನವರೇ. ಸಿದ್ದರಾಮಯ್ಯ ಅವರಿಗೆ ಕೇಳಲಿ, ಯಾರು ಸರ್ಕಾರ ಬೀಳಿಸಿದ್ದು ಅಂತ. ಡಿಕಶಿ ಮೊದಲೇ ಸೋಲನ್ನ ಒಪ್ಪಿಕೊಂಡಿದ್ದಾರೆ ಎಂದು ಗರಂ ಆದರು.