ಸಂಕ್ರಾಂತಿ ಹಬ್ಬದಂದು ಶಿವಗಂಗೆ ಬೆಟ್ಟ ಹತ್ತಲು ಭಕ್ತರಿಗೆ ನಿರ್ಬಂಧ…

54
firstsuddi

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಶಿವಗಂಗೆ ಬೆಟ್ಟವನ್ನು ಏರಲು ಜನವರಿ 14 ಹಾಗೂ 15 ರಂದು ನಿರ್ಬಂಧಿಸಲಾಗಿದೆ.

ಇತ್ತೀಚೆಗೆ ಹೊಸವರ್ಷಾಚರಣೆಯಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಬೆಟ್ಟದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಹಿನ್ನೆಲೆ ಹಾಗೂ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಹೀಗಾಗಿ ದಿನಾಂಕ 14 ಮತ್ತು 15ರಂದು ತಹಶೀಲ್ದಾರ್ ಕೆ. ಮಂಜುನಾಥ್ ಅವರು ಶಿವಗಂಗೆ ಬೆಟ್ಟ ಪ್ರವೇಶಕ್ಕೆ ನಿರ್ಬಧ ವಿಧಿಸಿ ಆದೇಶ ಪ್ರಕಟಿಸಿದ್ದಾರೆ. ತಹಶೀಲ್ದಾರ್ ಆದೇಶಕ್ಕೆ ಜನರು ಹಾಗೂ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.