ಸಂಚರಿಸುತ್ತಿದ್ದ ಬಸ್ಸಿನಿಂದ ಬಿದ್ದು ಕಂಡಕ್ಟರ್ ಸಾವು…

101
firstsuddi

ಮಂಗಳೂರು: ಸಂಚರಿಸುತ್ತಿದ್ದ ಬಸ್ಸಿನಿಂದ ಬಿದ್ದು ಕಂಡಕ್ಟರ್ ರೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ನಂತೂರು ಸರ್ಕಲ್ ಬಳಿ ನಡೆದಿದೆ.

ಮೃತ ನಿರ್ವಾಹಕನನ್ನು ಈರಯ್ಯ ಎಂದು ಗುರುತಿಸಲಾಗಿದೆ. ಬಸ್, ನಗರದ ಕೆಪಿಟಿ ಕಡೆಯಿಂದ ಆಗಮಿಸಿ ನಂತೂರು ವೃತ್ತದಲ್ಲಿ ತಿರುವು ಪಡೆಯುತ್ತಿದ್ದಾಗ ಬಸ್ಸಿನ ಎದುರಿನ ಫೂಟ್ ಬೋರ್ಡ್ ನಲ್ಲಿದ್ದ ಕಂಡಕ್ಟರ್ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಕಾರೊಂದರ ಫ್ರಂಟ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಂಡಕ್ಟರ್ ನನ್ನು ಕೂಡಲೇ ಟ್ರಾಫಿಕ್ ಪೊಲೀಸರು ಹಾಗೂ ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಈರಯ್ಯ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಸಂಬಂಧ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.