ಸಂಭ್ರಮದ ರಕ್ಷಾ ಬಂಧನ, ವಿವಿಧ ದೇವಸ್ಥಾನಗಳಲ್ಲಿ ಪೂಜೆ. 

76

 ಕೊಟ್ಟಿಗೆಹಾರ: ವಿವಿಧ ದೇವಸ್ಥಾನಗಳಲ್ಲಿ ರಕ್ಷಾ ಬಂಧನ ಹಬ್ಬ (ರಾಖಿ ಪೂರ್ಣಿಮಾ)ವನ್ನು ಸಂಭ್ರಮದಿಂದ ಆಚರಿಸಲಾಯಿತು.ಕೊಟ್ಟಿಗೆಹಾರ,ಅತ್ತಿಗೆರೆ, ಬಣಕಲ್,ನಿಡುವಾಳೆ ದೇವಸ್ಥಾನಗಳಲ್ಲಿ ರಕ್ಷಾ ಬಂಧನದ ವಿಶೇಷ  ಪೂಜೆ ನಡೆಯಿತು. ಅತ್ತಿಗೆರೆ ಸೋಮೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಮಾತನಾಡಿ’ ರಕ್ಷಾ ಬಂಧನ ಹಬ್ಬವನ್ನು ರಾಖಿ ಪೂರ್ಣಿಮ ಎಂದು,ಕರೆಯಲಾಗುತ್ತದೆ.ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿ ಮತ್ತು ರಕ್ಷಣೆಯ ಬಂಧವನ್ನು ಈ ಹಬ್ಬ ಸಂಕೇತಿಸುತ್ತದೆ.ಪೂರ್ಣಿಮ ಎಂದರೆ ಹುಣ್ಣಿಮೆ ಎಂದು ಅರ್ಥ.ಸಮಾಜದಲ್ಲಿ ಎಲ್ಲರೂ ಸಹೋದರತೆಯ ಮನೋಭಾವದಿಂದ ನಡೆಯಲು ಹಾಗೂ ಲೋಕ ಕಲ್ಯಾಣಕ್ಕಾಗಿಯೂ ಈ ವಿಶೇಷ ಪೂಜೆ ಅರ್ಪಿಸಲಾಗುತ್ತದೆ’ಎಂದರು.ದೇವಸ್ಥಾನದಲ್ಲಿ ದೇವನಗೂಲ್, ತರುವೆ, ಕೊಟ್ಟಿಗೆಹಾರ, ಬಿನ್ನಡಿ ಮತ್ತಿತರ ಗ್ರಾಮಸ್ಥರು ದೇವಸ್ಥಾನದಲ್ಲಿ ಜಮಾಯಿಸಿ ವಿಶೇಷ ಪೃಜೆಯಲ್ಲಿ ಪಾಲ್ಗೊಂಡರು.